ಹೈದರಾಬಾದ್: ಲೋಕಸಭೆ ಚುನಾವಣೆ ರಂಗೇರುತ್ತಿದೆ. ಅಭ್ಯರ್ಥಿಗಳು ಮತದಾರ ಪ್ರಭುಗಳ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿದ್ದಾರೆ.ಇದರ ಮಧ್ಯೆ ಝಣ ಝಣ ಕಾಂಚಾಣದ ಅಬ್ಬರ ಕೂಡ ಜೋರಾಗಿದೆ.
ಚುನಾವಣೆಯಲ್ಲಿ ಕಾಂಚಾಣ ಕುಣಿತ: ಹೈದರಾಬಾದ್ನಲ್ಲಿ 7.2 ಕೋಟಿ ರೂ.ವಶ - ತೆಲಂಗಾಣ
ತೆಲಂಗಾಣದಲ್ಲಿ ಬರೋಬ್ಬರಿ 7.2ಕೋಟಿ ರೂ ವಶಕ್ಕೆ ಪಡೆದುಕೊಂಡಿರುವುದಾಗಿ ಕಾನೂನು ಸುವ್ಯವಸ್ಥೆ ಎಡಿಜಿ ಜಿತೇಂದ್ರ ಮಾಹಿತಿ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದಾಗಿ ಹೇಳಿದ್ದಾರೆ.
ತೆಲಂಗಾಣದಲ್ಲಿ ಬರೋಬ್ಬರಿ 7.2ಕೋಟಿ ರೂ ವಶಕ್ಕೆ ಪಡೆದುಕೊಂಡಿರುವುದಾಗಿ ಕಾನೂನು ಸುವ್ಯವಸ್ಥೆ ಎಡಿಜಿ ಜಿತೇಂದ್ರ ಮಾಹಿತಿ ನೀಡಿದ್ದಾರೆ. ಚುನಾವಣಾ ಆಯೋಗ ನೀಡಿರುವ ಸೂಚನೆಯಂತೆ ನಾವು ರಾಜ್ಯದಲ್ಲಿ ನ್ಯಾಯಯುತ ಮತ್ತು ಶಾಂತಿಯುತ ಮತದಾನ ನಡೆಸಲು ಎಲ್ಲ ರೀತಿಯ ಕ್ರಮ ಕೈಗೊಂಡಿದ್ದೇವೆ.
ನಕ್ಸಲ್ ಪ್ರದೇಶಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಈವರೆಗೆ 8,394 ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಜತೆಗೆ ಕಾಂಗ್ರೆಸ್ನ ಮಲಕಾಂಗರಿ ಅಭ್ಯರ್ಥಿ ರೇವಂತ್ ರೆಡ್ಡಿಯವರಿಗೆ 4+4ರ ಭದ್ರತೆ ಒದಗಿಸಿರುವುದಾಗಿ ತಿಳಿಸಿದ್ದಾರೆ. ಯಾವುದೇ ನಾಯಕರು ಬೆದರಿಕೆಗೆ ಸಂಬಂಧಿಸಿದಂತೆ ಭದ್ರತೆ ಕೇಳಿದರೆ ನಾವು ಒದಗಿಸುವುದಾಗಿ ತಿಳಿಸಿದ್ದಾರೆ.