ಹೈದರಾಬಾದ್: ಅಪರಾಧಗಳ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲೋಸ್ಡ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮರಾಗಳ ಬಳಕೆಯಲ್ಲಿ ಹೈದರಾಬಾದ್ಗೆ ಮಾನ್ಯತೆ ಸಿಕ್ಕಿದೆ. ಗರಿಷ್ಠ ಸಂಖ್ಯೆಯ ಸಿಸಿಟಿವಿ ಕ್ಯಾಮರಾಗಳನ್ನು ಹೊಂದಿರುವ ವಿಶ್ವದ 150 ನಗರಗಳ ಪಟ್ಟಿಯಲ್ಲಿ ಹೈದರಾಬಾದ್ 16ನೇ ಸ್ಥಾನದಲ್ಲಿದೆ.
ಲಂಡನ್ ಮೂಲದ ಕ್ಯಾಂಪರಿಟೆಕ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ. ಸಾವಿರ ಜನರಿರುವ ವ್ಯಾಪ್ತಿಗೆ 30 ಕ್ಯಾಮರಾದಂತೆ ಒಂದು ಕೋಟಿ ಜನರ ಮೇಲೆ ನಿಗಾ ಇಡಲು 3 ಲಕ್ಷ ಕ್ಯಾಮರಾಗಳನ್ನು ಹೈದರಾಬಾದ್ನಲ್ಲಿ ಅಳವಡಿಸಲಾಗಿದೆ ಎಂದು ಸಮೀಕ್ಷೆಯ ವರದಿ ತಿಳಿಸಿದೆ. 38.91 ಲಕ್ಷ ಜನಸಂಖ್ಯೆಗೆ 4.65 ಲಕ್ಷ ಕ್ಯಾಮರಾಗಳನ್ನು ಹೊಂದಿರುವ ಚೀನಾದ ತೈವಾನ್ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿದೆ.