ಕರ್ನಾಟಕ

karnataka

ETV Bharat / bharat

ಮಳೆಯಿಂದ ಹೈದರಾಬಾದ್​ಗಿಲ್ಲ ರಿಲೀಫ್..ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಘೋಷಣೆ - ಹೈದರಾಬಾದ್ ಮಳೆ ಸುದ್ದಿ

ಹೈದರಾಬಾದ್​ನಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಭಾರತ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

orange alert to Hyderabad
ಹೈದರಾಬಾದ್​ಗೆ ಮಳೆ ಮುನ್ನೆಚ್ಚರಿಕೆ

By

Published : Oct 18, 2020, 9:55 PM IST

ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದೆ.

"ನಿನ್ನೆ ರಾತ್ರಿ ಹೈದರಾಬಾದ್ ನಗರದಲ್ಲಿ ಗುಡುಗು ಸಹಿತ ಮಳೆಯಾಗಿದೆ, ನಾವು ಹೈದರಾಬಾದ್ ಅನ್ನು ಹೆಚ್ಚಿನ ಆದ್ಯತೆಯೊಂದಿಗೆ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಇಲ್ಲಿ ಮಾನ್ಸೂನ್​​ ತುಂಬಾ ಸಕ್ರಿಯವಾಗಿದೆ. ಮುಂದಿನ 24 ಗಂಟೆಗಳಲ್ಲಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಹೊಸ ವ್ಯವಸ್ಥೆ ರೂಪುಗೊಳ್ಳಲಿದೆ. ಇದು ಪಶ್ಚಿಮ ಅಥವಾ ಉತ್ತರಕ್ಕೆ ಚಲಿಸುತ್ತದೆ" ಎಂದು ಹಿರಿಯ ವಿಜ್ಞಾನಿ ರಾಜೇಂದ್ರ ಕುಮಾರ್ ಜೆನಮಣಿ ಹೇಳಿದ್ದಾರೆ.

"ಮುಂದಿನ 24 ಗಂಟೆ ಆಂಧ್ರ ಪ್ರದೇಶದ ಕರಾವಳಿ, ದಕ್ಷಿಣ ಒಡಿಶಾ ಮತ್ತು ತೆಲಂಗಾಣ ಮೇಲ್ವಿಚಾರಣೆಯಲ್ಲಿ ಇರಲಿದ್ದು, ಭಾರೀ ಮಳೆಯಿಂದಾಗಿ ನಾವು ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದೇವೆ" ಎಂದು ಜೆನಮಣಿ ಹೇಳಿದ್ದಾರೆ.

ABOUT THE AUTHOR

...view details