ಹೈದರಾಬಾದ್:ವೇಷ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹೋಟೆಲ್ಗಳ ಮೇಲೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರು, ಐವರು ಉಜ್ಬೇಕಿಸ್ತಾನ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ.
ಸೆಕ್ಸ್ ರಾಕೆಟ್ ದಂಧೆ : ಭಾರತೀಯರು ಸೇರಿ ಐವರು ಉಜ್ಬೇಕಿಸ್ತಾನ್ ಮಹಿಳೆಯರ ರಕ್ಷಣೆ - ಐವರು ಉಜ್ಬೇಕಿಸ್ತಾನ್
ಏಕಕಾಲದಲ್ಲಿ ಎರಡು ಹೋಟೆಲ್ಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಭಾರತೀಯರೂ ಸೇರಿ ಐವರು ಉಜ್ಬೇಕಿಸ್ತಾನ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ.

ಸಂಗ್ರಹ ಚಿತ್ರ
ಹೈದರಾಬಾದ್ನ ಎಸ್ಆರ್ನಗರ ಹಾಗೂ ಪಂಜಾಗುಟ್ಟ ಪ್ರದೇಶದಲ್ಲಿ ದಾಳಿ ನಡೆಸಿರುವ ಪೊಲೀಸರು ಇಬ್ಬರು ಭಾರತೀಯ ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿರುವ ಪೊಲೀಸರು ಏಕಕಾಲದಲ್ಲಿ ಎರಡು ಹೋಟೆಲ್ಗಳ ಮೇಲೆ ದಾಳಿ ನಡೆಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ರಕ್ಷಣೆ ಮಾಡಿರುವ ಮಹಿಳೆಯರನ್ನ ಮಹಿಳಾ ಸಹಾಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.