ಹೈದರಾಬಾದ್: ಈದ್ ಅಲ್- ಅಧಾ ಹಬ್ಬಕ್ಕಾಗಿ 1.5 ಲಕ್ಷ ರೂ. ಬೆಲೆಯ 130 ಕೆಜಿ ತೂಗುವ ಕುರಿಯನ್ನು ಬಲಿ ನೀಡಲು ಕುಟುಂಬವೊಂದು ಸಜ್ಜಾಗಿದೆ.
ಹಬ್ಬಕ್ಕಾಗಿ 130 ಕೆಜಿ ತೂಕದ ಕುರಿ ಅರ್ಪಣೆಗೆ ಕುಟುಂಬದ ಸಿದ್ಧತೆ: ಇದರ ಬೆಲೆ ಬರೋಬ್ಬರಿ___ ! - ಪಿಯರಿ ಮೊಹಮ್ಮದ್
ಕುಟುಂಬವೊಂದು ಹಬ್ಬಕ್ಕಾಗಿ ಈ ಸಂಪ್ರದಾಯವನ್ನು ದಶಕಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಈಗ ಬಲಿ ಕೊಡುವ ಕುರಿ 128 ರಿಂದ 131 ಕೆಜಿಯಷ್ಟು ತೂಕ ಹೊಂದಿದ್ದು, ಒಣ ಹಣ್ಣು, ಸೇಬು, ಹಾಲು ಮತ್ತು ಕಡಲೆಹಿಟ್ಟಿನ್ನು ತಿನ್ನಿಸಿ ಬಲಿಷ್ಠ ಮಾಡಲಾಗಿದೆ. ಈ ರೀತಿಯ ಕುರಿಯನ್ನು ದೇವರಿಗೆ ಅರ್ಪಣೆ ಮಾಡುವುದರಿಂದ ದೇವರು ಒಲಿಯುತ್ತಾನೆ ಎನ್ನುವುದು ಇವರ ನಂಬಿಕೆ

ನಮ್ಮ ಕುಟುಂಬವು ಪ್ರತಿವರ್ಷ ಈ ಹಬ್ಬದಂದು ಆರೋಗ್ಯಕರ ಮತ್ತು ಬಲಿಷ್ಠವಾದ ಪ್ರಾಣಿಯನ್ನು ಬಲಿ ನೀಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ ಎನ್ನುತ್ತಾರೆ ಮೊಹಮ್ಮದ್ ಸರ್ವಾರ್. ಪ್ರತಿ ವರ್ಷ ನಾವು ಈದ್ ಅಲ್-ಅಧಾವನ್ನು ಆಚರಿಸುವಾಗ ದೇವರ ಹೆಸರಿನಲ್ಲಿ ಈ ರೀತಿಯ ಕುರಿಯನ್ನು ಬಲಿ ಕೊಡುತ್ತೇವೆ. ಈ ಸಂಪ್ರದಾಯವನ್ನು ದಶಕಗಳಿಂದ ಅನುಸರಿಕೊಂಡು ಬರಲಾಗುತ್ತಿದೆ. ಈಗ ಬಲಿ ಕೊಡುವ ಕುರಿಗೆ ಪಿಯರಿ ಮೊಹಮ್ಮದ್ ಎಂದು ಹೆಸರಿಡಲಾಗಿದ್ದು,128 ರಿಂದ 131 ಕೆಜಿಯಷ್ಟು ತೂಕ ಹೊಂದಿದೆ. ಒಣ ಹಣ್ಣು, ಸೇಬು, ಹಾಲು ಮತ್ತು ಕಡಲೆಹಿಟ್ಟಿನ್ನು ತಿನ್ನಿಸಿ ಈ ಕುರಿಯನ್ನು ಬಲಿಷ್ಠವಾಗಿ ಮಾಡಿದ್ದೇವೆ ಎನ್ನುತ್ತಾರೆ ಸರ್ವಾರ್.
ಮುಂದುವರಿದು ಈ ಕುರಿ ಬಗ್ಗೆ ಮಾತನಾಡಿರುವ ಅವರು, ನಾವು ಪಿಯರಿ ಮೊಹಮ್ಮದ್ನನ್ನು ಈದ್ ಅಲ್-ಅಧಾ ದಿನದಂದು ಸರ್ವಶಕ್ತನ ಹೆಸರಿನಲ್ಲಿ ಬಲಿ ಕೊಡುತ್ತೇವೆ. ದೇವರು ನಮ್ಮ ಈ ಬಲಿಯನ್ನು ಸ್ವೀಕರಿಸುತ್ತಾನೆ ಮತ್ತು ಶೀಘ್ರದಲ್ಲೇ ಕೊರೊನಾ ಸಾಂಕ್ರಾಮಿಕ ರೋಗದಿಂದ ಹೊರಬರಲು ಸಹಾಯ ಮಾಡುತ್ತಾನೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳುತ್ತಾರೆ.