ಹೈದರಾಬಾದ್(ತೆಲಂಗಾಣ):ಯಾವುದೇ ಬೆಳೆ ಬೆಳೆಯೋಕೆ ಗದ್ದೆ, ಮಣ್ಣು ಇರಬೇಕು. ಜೊತೆಗೆ ಆಗಾಗ್ಗೆ ರಾಸಾಯನಿಕಗಳನ್ನು ಬಳಸಬೇಕು ಅಂತಾ ತಿಳಿದಿದ್ದೇವೆ. ಆದ್ರೆ ಮಣ್ಣು ಮತ್ತು ಕೀಟನಾಶಕಗಳನ್ನು ಬಳಸದೆಯೇ ಆಧುನಿಕ ಕೃಷಿ ವಿಧಾನವಾದ ಹೈಡ್ರೋಪೋನಿಕ್ಸ್ ಬಳಸಿ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡ ಡಾ. ಸತ್ಯ ನಾರಾಯಣ ರೆಡ್ಡಿ, ಹೈಡ್ರೋಪೋನಿಕ್ಸ್ ಎನ್ನುವುದು ನೀರು ಆಧಾರಿತ ಪೋಷಕಾಂಶಗಳ ಸಮೃದ್ಧ ದ್ರಾವಣಗಳಲ್ಲಿ ಸಸ್ಯಗಳನ್ನು ಬೆಳೆಯುವ ಒಂದು ವಿಧಾನವಾಗಿದೆ. ಈ ಸಸ್ಯಗಳಿಗೆ ಮಣ್ಣಿನ ಅಗತ್ಯವಿಲ್ಲ, ಬದಲಾಗಿ, ಪರ್ಲೈಟ್, ಉಣ್ಣೆ ಬಟ್ಟೆ, ಕ್ಲೇ ಬಾಲ್, ಪಾಚಿಯಂತಹ ವಸ್ತುಗಳನ್ನು ಬಳಸಿ ಬೆಳೆಯಬಹುದು ಎಂದು ತಿಳಿಸಿದ್ದಾರೆ.