ಹೈದರಾಬಾದ್(ತೆಲಂಗಾಣ): ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆಗೆ ಮತದಾರ ನೀರಸ ಪ್ರತಿಕ್ರಿಯೆ ನೀಡಿದ್ದು, ಯಾವ ಪಕ್ಷದ ಚುನಾವಣಾ ಪ್ರಚಾರಗಳೂ ಕೂಡಾ ಮತಪ್ರಭುವಿನ ಮನ ಗೆಲ್ಲಲಿಲ್ಲ. ಹಾಗಾಗಿ ಕೇವಲ ಶೇ.46.55 ರಷ್ಟು ಮಾತ್ರ ಮತದಾನವಾಗಿದೆ.
ತೆಲಂಗಾಣ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಮತ್ತು ಹಲವಾರು ಚುನಾವಣಾ ಪ್ರಚಾರದ ಹೊರತಾಗಿಯೂ 74.44 ಲಕ್ಷ ಮತದಾರರಲ್ಲಿ ಶೇ. 46.55ರಷ್ಟು ಮಾತ್ರ ಮತದಾರರು ಹಕ್ಕು ಚಲಾಯಿಸಿದ್ದಾರೆ.
ಜಿಎಚ್‌ಎಂಸಿಯ 150 ವಾರ್ಡ್‌ಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆದಿದ್ದು, ಡಿಸೆಂಬರ್ 4ಕ್ಕೆ ಮತ ಎಣಿಕೆ ನಡೆಯಲಿದೆ. ತೆಲಂಗಾಣ ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ವಾರ್ಡ್ ಸಂಖ್ಯೆ 26 ರ ಎಲ್ಲಾ 69 ಮತಗಟ್ಟೆಗಳಲ್ಲಿ ನಾಳೆ ಮರು ಚುನಾವಣೆ ನಡೆಸಲು ಆದೇಶಿಸಿದೆ. ಈ ವಾರ್ಡ್ನಲ್ಲಿ ನಡೆದ ಮತದಾನದಲ್ಲಿ ಸಿಪಿಐ ಬದಲಿಗೆ ಸಿಪಿಐ (ಎಂ) ಚಿಹ್ನೆಯನ್ನು ಬ್ಯಾಲೆಟ್ ಪೇಪರ್‌ನಲ್ಲಿ ಮುದ್ರಿಸಲಾಗಿದೆ ಎಂದು ಕಂಡುಬಂದಿದೆ.