ಹೈದರಾಬಾದ್:ದಾವೂದ್ ಇಬ್ರಾಹಿಂನ ಆಪ್ತ, ಲಷ್ಕರ್ ಉಗ್ರಗಾಮಿ ಅಬ್ದುಲ್ ಕರೀಮ್ ತುಂಡಾನನ್ನು ಭಾರತ-ನೇಪಾಳ ಗಡಿಯಲ್ಲಿ ಸೆರೆಹಿಡಿಯುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಆತನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದು, ಶನಿವಾರ ಕೋರ್ಟ್ಗೆ ಹಾಜರುಪಡಿಸಿದ್ದರು.
ಲಷ್ಕರ್ ಉಗ್ರಗಾಮಿ ಅಬ್ದುಲ್ ಕರೀಮ್ ಚಂಚಲಗುಡ ಜೈಲಿಗೆ - Hyderabad City police have brought terrorist Abdul Karim Tunda to the city
ತೆಲಂಗಾಣದ ಸಿಕಂದರಾಬಾದ್ನ ಗಣೇಶ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣದ ವಿಚಾರಣೆಗಾಗಿ ಲಷ್ಕರ್ ಉಗ್ರ ಅಬ್ದುಲ್ ಕರೀಂನನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಶನಿವಾರ ಕರೆತರಲಾಗಿತ್ತು. ನ್ಯಾಯಾಲಯವು ಅ. 15 ರವರೆಗೆ ಈತನನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಅದೇಶಿಸಿದೆ. ಎಸ್ಐಟಿ ಅಧಿಕಾರಿಗಳು ಅಬ್ದುಲ್ನನ್ನು ಚಂಚಲ್ಗುಡ ಜೈಲಿಗೆ ರವಾನಿಸಿದ್ದಾರೆ.
ತೆಲಂಗಾಣದ ಸಿಕಂದರಾಬಾದ್ನ ಗಣೇಶ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಗೊಂಡ ಪ್ರಕರಣದ ವಿಚಾರಣೆಗಾಗಿ ಆತನನ್ನು ನಾಂಪಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಲಯವು ಅ. 15 ರವರೆಗೆ ಈತನನ್ನು ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿದೆ. ಎಸ್ಐಟಿ ಅಧಿಕಾರಿಗಳು ಅಬ್ದುಲ್ ಕರೀಮ್ನನ್ನು ಚಂಚಲ್ಗುಡ ಜೈಲಿಗೆ ರವಾನಿಸಿದ್ದಾರೆ.
ಉಗ್ರ ಕರೀಮ್ ಭಾರತದಲ್ಲಿ ನಡೆದ 40ಕ್ಕೂ ಹೆಚ್ಚು ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಅತಿ ಹೆಚ್ಚಿನ ದಾಳಿಗಳನ್ನು ಉತ್ತರಪ್ರದೇಶ, ದೆಹಲಿ ಹಾಗೂ ಪಂಜಾಬ್ನಲ್ಲಿ ನಡೆಸಿದ್ದಾನೆ. ಅಲ್ಲದೇ ಈತ ದಾವೂದ್ ಇಬ್ರಾಹಿಂನ ಸಹಚರ ಮತ್ತು ಲಷ್ಕರ್ ಸಂಘಟನೆಯವ ಎಂದು ತಿಳಿದುಬಂದಿದೆ.