ಕರ್ನಾಟಕ

karnataka

ETV Bharat / bharat

ಇಂದು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನ: ಮದುವಣಗಿತ್ತಿಯಂತೆ ಸಿಂಗಾರಗೊಂಡ ಮುತ್ತಿನ ನಗರಿ - ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನ

ತೆಲಂಗಾಣ ಅಸೆಂಬ್ಲಿ ಕಟ್ಟಡ ಸೇರಿದಂತೆ ನಗರದ ಪ್ರಮುಖ ಸರ್ಕಾರಿ ಕಚೇರಿಗಳು ಝಗಮಗಿಸುವ ವಿದ್ಯುತ್​ ದೀಪಾಲಂಕಾರ ಹಾಗೂ ಹೂಗಳಿಂದ ಸಿಂಗಾರಗೊಂಡಿವೆ. ತೆಲಂಗಾಣ ರಾಜ್ಯ ರಚನೆಯಾದ ಈ ಶುಭ ದಿನದ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದು ರಾಷ್ಟ್ರಧ್ವಜ ಹಾರಿಸಿ ಸಂಸ್ಥಾಪನಾ ದಿನ ಆಚರಿಸಲಾಗುತ್ತೆ.

ಇಂದು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನ

By

Published : Jun 2, 2019, 3:47 AM IST

Updated : Jun 2, 2019, 7:15 AM IST

ಹೈದರಾಬಾದ್​:ಇಂದು ತೆಲಂಗಾಣ ರಾಜ್ಯ ಸ್ಥಾಪನಾ ದಿನವಾಗಿದ್ದು, ಈ ದಿನವನ್ನು ಆಚರಿಸಲು ಮುತ್ತಿನ ನಗರಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಇಂದು ತೆಲಂಗಾಣ ರಾಜ್ಯ ಸಂಸ್ಥಾಪನಾ ದಿನ

ಇದಕ್ಕಾಗಿ ತೆಲಂಗಾಣ ಅಸೆಂಬ್ಲಿ ಕಟ್ಟಡ ಸೇರಿದಂತೆ ನಗರದ ಪ್ರಮುಖ ಸರ್ಕಾರಿ ಕಚೇರಿಗಳು ಝಗಮಗಿಸುವ ವಿದ್ಯುತ್​ ದೀಪಾಲಂಕಾರ ಹಾಗೂ ಹೂಗಳಿಂದ ಸಿಂಗಾರಗೊಂಡಿವೆ. ತೆಲಂಗಾಣ ರಾಜ್ಯ ರಚನೆಯಾದ ಈ ಶುಭ ದಿನದ ಹಿನ್ನೆಲೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದು ರಾಷ್ಟ್ರಧ್ವಜ ಹಾರಿಸಿ ಸಂಸ್ಥಾಪನಾ ದಿನ ಆಚರಿಸಲಾಗುತ್ತೆ. ಇದೇ ವೇಳೆ ನಗರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಕೆ.ಚಂದ್ರಶೇಖರ್​ ರಾವ್​ ಭಾಗಿಯಾಗಲಿದ್ದಾರೆ.

ಇನ್ನು ತೆಲಂಗಾಣ ಸಂಸ್ಥಾಪನಾ ದಿನದ ಪ್ರಯುಕ್ತ ಸಿಎಂ ಕೆಸಿಆರ್​ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. 2014, ಜೂನ್​ 2ರಂದು ತೆಲಂಗಾಣ ರಾಜ್ಯ ರಚನೆಯಾಯಿತು. ರಾಜ್ಯ ರಚನೆಯಾಗಿ 5 ವರ್ಷ ಕಳೆದಿದ್ದು, ಇದೀಗ 6ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

Last Updated : Jun 2, 2019, 7:15 AM IST

ABOUT THE AUTHOR

...view details