ಹೈದರಾಬಾದ್: ಕೊರೊನಾ ಭೀತಿಯಿಂದ 34 ವರ್ಷದ ವ್ಯಕ್ತಿಯೊಬ್ಬ ತೆಲಂಗಾಣದ ಹೈದರಾಬಾದ್ನ ಹುಸೇನ್ ಸಾಗರ್ ಸರೋವರಕ್ಕೆ ಹಾರಿ ಸುಸೈಡ್ ಮಾಡಿಕೊಂಡಿದ್ದಾನೆ.
ಈತ ಮೂಲತಃ ಪಶ್ಚಿಮ ಬಂಗಾಳ ನಿವಾಸಿಯಾಗಿದ್ದು, ಹೈದರಾಬಾದ್ನಲ್ಲಿ ವಾಸವಿದ್ದನು. ಕೆಲ ದಿನಗಳ ಹಿಂದೆ ಆನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಬಳಿಕ ಆತನಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದಿದ್ದು, ಬೇರೆ ಆಸ್ಪತ್ರೆಗೆ ದಾಖಲಾಗುವಂತೆ ವೈದ್ಯರು ಸಲಹೆ ನೀಡಿದ್ದಾರೆ.