ಹೈದರಾಬಾದ್ (ತೆಲಂಗಾಣ): ಮಾನವ ಕಳ್ಳಸಾಗಣೆಯ ಮತ್ತೊಂದು ಪ್ರಕರಣ ಪತ್ತೆಯಾಗಿದ್ದು, 2018 ರಲ್ಲಿ ಉದ್ಯೋಗದ ನೆಪದಲ್ಲಿ ಮಧ್ಯಪ್ರಾಚ್ಯಕ್ಕೆ ಕಳ್ಳಸಾಗಣೆಯಾಗಿರುವ ಮಹಿಳೆಯ ಪತಿ ಕೇಂದ್ರ ಸರ್ಕಾರಕ್ಕೆ ತನ್ನ ಪತ್ನಿಯನ್ನು ರಕ್ಷಿಸಿಕೊಡುವಂತೆ ಮನವಿಮಾಡಿದ್ದಾರೆ.
ಪ್ಲೀಸ್ ಪತ್ನಿಯನ್ನ ರಕ್ಷಿಸಿ.... ಕೇಂದ್ರಕ್ಕೆ ಮನವಿ ಮಾಡಿದ ಪತಿ - Hyderabad news
ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನ ಜೆಡ್ಡಾದಿಂದ ರಕ್ಷಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದಾರೆ.
ಖದೀರ್ ಎಂಬ ಏಜೆಂಟ್ ನನ್ನ ಪತ್ನಿಯನ್ನ ಸಂಪರ್ಕಿಸಿ ದುಬೈನಲ್ಲಿ ಉತ್ತಮ ಉದ್ಯೋಗ ನೀಡುವುದಾಗಿ ತಿಳಿಸಿದ್ದ. ಈ ಏಜೆಂಟರನ್ನು ನಂಬಿ, ನನ್ನ ಹೆಂಡತಿ 2018 ರ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಿಂದ ಹೊರಟರು ಎಂದು ಸಂತ್ರಸ್ತೆಯ ಪತಿ ಲಕ್ಷ್ಮಯ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆತನನ್ನ ನಂಬಿ ತೆರಳಿದ ನನ್ನ ಪತ್ನಿಯನ್ನ ದುಬೈಗೆ ಕರೆದೊಯ್ಯುವ ಬದಲಾಗಿ ಜೆಡ್ಡಾಗೆ ಕಳುಹಿಸಲಾಗಿದೆ. ಅಲ್ಲಿ ಆಕೆಯನ್ನ ಒಂದು ನಿವಾಸದಲ್ಲಿ ಗೃಹಿಣಿಯಾಗಿ ನೇಮಿಸಲಾಗಿದೆ. ಆ ಉದ್ಯೋಗದಾತ ಅವಳನ್ನು ಹಿಂಸಿಸುವುದರ ಜೊತೆಗೆ ಆಹಾರ ನೀಡದೇ ನರಕಯಾತನೆ ನೀಡುತ್ತಿದ್ದಾನೆ. ಹಾಗಾಗಿ ನನ್ನ ಹೆಂಡತಿಯನ್ನು ರಕ್ಷಿಸಿ ಮತ್ತೆ ಹೈದರಾಬಾದ್ಗೆ ವಾಪಸ್ ಕಳುಹಿಸಲು ಸಹಾಯ ಮಾಡುವಂತೆ ನಾನು ಭಾರತ ಸರ್ಕಾರವನ್ನು ವಿನಂತಿಸುತ್ತೇನೆ ಎಂದು ಪತಿ ಮನವಿ ಮಾಡಿದ್ದಾರೆ.