ಕರ್ನಾಟಕ

karnataka

ETV Bharat / bharat

ಹೆಂಡ್ತಿ ಕೊಲೆಗೆ ಗಂಡನ ಮಾಸ್ಟರ್​ ಪ್ಲಾನ್​​... 24 ಗಂಟೆಯಲ್ಲಿ ಪೊಲೀಸರಿಂದ ಸತ್ಯಾಂಶ ಬಯಲು! - ಮಹಾರಾಷ್ಟ್ರದ ಬೀಡ್​

ಮಹಾರಾಷ್ಟ್ರದ ಬೀಡ್​​ನಲ್ಲಿ ಮಾಸ್ಟರ್​ ಪ್ಲಾನ್​ ಮಾಡಿ ಹೆಂಡತಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಕೇವಲ 24 ಗಂಟೆಗಳಲ್ಲಿ ಪೊಲೀಸರು ಪ್ರಕರಣದ ಸತ್ಯಾಂಶ ಪತ್ತೆ ಹಚ್ಚಿದ್ದಾರೆ.

ಕೊಲೆಯಾದ ಹೆಂಡತಿ

By

Published : Nov 20, 2019, 4:36 AM IST

ಬೀಡ್​​:ಕಳೆದ ಸೋಮವಾರ ಸಂಜೆ ದ್ವಿಚಕ್ರ ವಾಹನಕ್ಕೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್​​ ಸಿಕ್ಕಿದೆ.

ಕಟ್ಟಿಕೊಂಡ ಹೆಂಡತಿ ಕೊಲೆ ಮಾಡುವ ಉದ್ದೇಶದಿಂದಲೇ ಈ ರೀತಿಯಾಗಿ ಗಂಡ ಪ್ಲಾನ್​ ಮಾಡಿಕೊಂಡು, ಅಪಘಾತವಾದ ವೇಳೆ ಆಕೆಯನ್ನ ಶಸ್ತ್ರಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮದುವೆಯಾಗಿದ್ದ ಸೋನಾಲಿ ಹಾಗೂ ನಿತಿನ್​ ಕಳೆದ ಆರು ವರ್ಷಗಳಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಮೇಲಿಂದ ಮೇಲೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಎಂಜಿನಿಯರಿಂಗ್​ ಕಾಲೇಜ್​​ನಲ್ಲಿ ಕೆಲಸ ಮಾಡುತ್ತಿದ್ದ ಆಕೆಯನ್ನ ಕಳೆದ ಸೋಮವಾರ ಪತಿ ನಿತಿನ್​​ ಒತ್ತಾಯ ಮಾಡಿ ಬೈಕ್​ ಮೇಲೆ ಕರೆದುಕೊಂಡು ಹೋಗಿದ್ದಾನೆ. ಇದೇ ವೇಳೆ ನಿತಿನ್​ ಸ್ನೇಹಿತ ಮತ್ತೊಂದು ಬದಿಯಿಂದ ಆಟೋ ರಿಕ್ಷಾ ತೆಗೆದುಕೊಂಡು ಬಂದು ಇವರ ಬೈಕ್​ಗೆ ಡಿಕ್ಕಿ ಹೊಡೆದಿದ್ದಾರೆ.

ಈ ವೇಳೆ ಕೆಳಗೆ ಬಿದ್ದ ಹೆಂಡತಿ ಮೇಲೆ ನಿತಿನ್​​ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದಾರೆ. ತಕ್ಷಣವೇ ಯಾರಿಗೂ ಗೊತ್ತಾಗದಂತೆ ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡುವ ನಾಟಕ ಸಹ ಮಾಡಿದ್ದಾರೆ. ಆದರೆ ಈ ವೇಳೆ ಆಕೆ ಸಾವನ್ನಪ್ಪಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಪೋಷಕರು ಪ್ರಕರಣ ದಾಖಲು ಮಾಡಿಕೊಂಡು ಕೇವಲ 24 ಗಂಟೆಯಲ್ಲಿ ಪೊಲೀಸರು ಸತ್ಯಾಂಶ ಬಯಲು ಮಾಡಿದ್ದಾರೆ. ಇದೀಗ ಆರೋಪಿಗಳ ಬಂಧನ ಮಾಡಲಾಗಿದೆ.

ABOUT THE AUTHOR

...view details