ಭೂಪಾಲ್:ಇತ್ತೀಚೆಗೆ ಮದುವೆಯಾಗಿದ್ದ ದಂಪತಿ ವಿಚ್ಛೇದನಾಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಆ ಜೋಡಿಗೆ ಮದುವೆಯಾಗಿದ್ರೂ ಫಸ್ಟ್ನೈಟ್ ಮಾತ್ರ ಇನ್ನೂ ನಡೆದಿಲ್ಲ. ಯುಪಿಎಸ್ಸಿ ಪರೀಕ್ಷೆಗೆ ಸಿದ್ದವಾಗುತ್ತಿದ್ದ ನವವಿವಾಹಿತನೊಬ್ಬ ದಿನವಿಡೀ ಪುಸ್ತಕದೊಂದಿಗೆ ಕಾಲ ಕಳೆಯುತ್ತಿದ್ದ. ಇದರಿಂದ ಬೇಸರಗೊಂಡ ಹೆಂಡ್ತಿ ಆತನಿಗೆ ಗುಡ್ಬೈ ಹೇಳಿದ್ದಾಳೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಭೂಪಾಲ್ನಲ್ಲಿ. ಇಲ್ಲಿನ ಯುವಕನಿಗೆ ಇತ್ತೀಚೆಗೆ ಮದುವೆಯಾಗಿತ್ತು. ನೂರೊಂದು ಕನಸನ್ನು ಹೊತ್ತುಕೊಂಡು ಆ ಮಹಿಳೆ ಗಂಡನ ಮನೆಗೆ ಕಾಲಿಟ್ಟಿದ್ದಳು. ಆದರೆ, ಗಂಡ ಯುಪಿಎಸ್ಸಿ ಪರೀಕ್ಷೆಗೆ ತಯಾರಾಗುತ್ತಿದ್ದು, ಹೆಂಡ್ತಿ ಜೊತೆಗೆ ಸಮಯ ವ್ಯರ್ಥ ಮಾಡದೇ ಪುಸ್ತಕದೊಂದಿಗೆ ಕಾಲ ಕಳೆದಿದ್ದಾರೆ. ಇದರಿಂದ ಬೇಸತ್ತ ಮಹಿಳೆ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ. ಇನ್ನು ಹೆಂಡ್ತಿ ನಿರ್ಧಾರವನ್ನು ಗಂಡ ಎತ್ತಿ ಹಿಡಿದಿದ್ದಾನೆ.
ಪಿಹೆಚ್ಡಿ ಪೂರ್ಣಗೊಳಿಸಿರುವ ನನ್ನ ಗಂಡ ಯುಪಿಎಸ್ಸಿ ಪರೀಕ್ಷೆಗೆ ಸಿದ್ದವಾಗುತ್ತಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ-ತಾಯಿ ಮಾತಿಗೆ ನನ್ನನ್ನು ಮದುವೆ ಮಾಡಿಕೊಂಡಿದ್ದಾರೆ. ಮದುವೆಯಾದ ಬಳಿಕವೂ ತನಗೆ ಸಮಯ ನೀಡದೇ ಪುಸ್ತಕದೊಂದಿಗೆ ಕಾಲ ಕಳೆಯುತ್ತಿದ್ದಾರೆ. ನನ್ನ ಗಂಡನ ನಡುವಳಿಕೆಯಿಂದ ನಾನು ಬೇಸತ್ತು ಹೋಗಿದ್ದೇನೆ. ಹೀಗಾಗಿ ನನಗೆ ವಿಚ್ಛೇದನ ಮಂಜೂರು ಮಾಡಿಕೊಡಬೇಕೆಂದು ಯುವತಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದಾರೆ.
ನನ್ನ ಪತ್ನಿ ನನ್ನನ್ನು ಬಿಟ್ಟು ತವರು ಮನೆಗೆ ಹೋಗಿದ್ದಾರೆ. ನನ್ನನ್ನು ಇಷ್ಟಪಡದ ಯುವತಿಯೊಂದಿಗೆ ಇರಲು ಸಾಧ್ಯವಿಲ್ಲ. ಮದುವೆಯಾದ ಬಳಿಕವೂ ನಮ್ಮಿಬ್ಬರ ಮಧ್ಯೆ ಯಾವುದೇ ಸಂಬಂಧ ನಡೆದಿಲ್ಲವೆಂದು ಆ ಯುವಕ ಮತ್ತೊಂದು ಪಿಟಿಷನ್ ದಾಖಲು ಮಾಡಿದ್ದಾರೆ. ಈಗಾಗಲೇ ದಂಪತಿಯನ್ನು ಒಗ್ಗೂಡಿಸಲು ಸಂಬಂಧಿಗಳು ಪ್ರಯತ್ನಿಸಿದ್ರೂ ಪ್ರಯೋಜವಾಗಿಲ್ಲ. ಕೋರ್ಟ್ ವಿಚಾರಣೆ ಪ್ರಾರಂಭಕ್ಕೂ ಮುನ್ನ ಇವರಿಬ್ಬರ ಮಧ್ಯೆ ಇನ್ನು ನಾಲ್ಕು ಕೌನ್ಸೆಲಿಂಗ್ ನಡೆಯಲಿದೆ. ಇದಾದ ಬಳಿಕ ನ್ಯಾಯಾಲಯ ಯಾವ ತೀರ್ಮಾನ ಕೈಗೆತ್ತಿಕೊಳ್ಳುತ್ತೆ ಎಂಬುದು ಕಾದು ನೋಡ್ಬೇಕಾಗುತ್ತೆ.