ಚಿತ್ತೂರು(ಆಂಧ್ರಪ್ರದೇಶ): ಕೊರೊನಾ ಸೋಂಕು ತಗುಲಿದೆ ಎಂಬ ಶಂಕೆಯ ಮೇಲೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೆಡ್ಡಾ ತಿಪ್ಪಸಮುದ್ರಂ ಗ್ರಾಮದ ದಂಪತಿ ಹಮೀದ್ ಮತ್ತು ಸೈದಾಬಿ ಅವರನ್ನ ಆಸ್ಪತ್ರೆಗೆ ಕರೆತರಲಾಗಿತ್ತು.
ಸಾವಿನಲ್ಲೂ ಒಂದಾದ ದಂಪತಿ: ಗಂಡನ ಸಾವು ಸಹಿಸಲಾಗದೇ ಕ್ಷಣಾರ್ಧದಲ್ಲಿ ಕಣ್ಮುಚ್ಚಿದ ಹೆಂಡ್ತಿ! - ಸಾವಿನಲ್ಲೂ ಒಂದಾದ ಗಂಡ-ಹೆಂಡತಿ
ಗಂಡನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೊಳಗಾದ ಹೆಂಡತಿ ಕೂಡ ಕ್ಷಣಾರ್ಧದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದ ಅಧಿಕಾರಿಗಳು ಇಬ್ಬರಿಗೂ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ಹಮೀದ್ಗೆ ಕೊರೊನಾ ಸೋಂಕು ಇಲ್ಲ ಎಂದಿದ್ದಾರೆ. ಆದರೆ, ಹೆಂಡತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಗೊಂಡಿದೆ.
ಈ ವೇಳೆ ಹಮೀದ್ನನ್ನ ವಾಪಸ್ ಮನೆಗೆ ಕರೆದುಕೊಂಡು ಹೋಗಲು ಅಧಿಕಾರಿಗಳು ಮುಂದಾಗಿದ್ದು, ಆತ ವಾಹನ ಏರಲು ನಿರಾಕರಿಸಿದ್ದಾನೆ. ಆತನಿಗೆ ಬಲವಂತ ಮಾಡಲು ಮುಂದಾದಾಗ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ವೈದ್ಯರು ಚಿಕಿತ್ಸೆ ನೀಡಲು ಮುಂದಾದರೂ, ಆತ ಸಾವನ್ನಪ್ಪಿದ್ದಾನೆ. ಗಂಡನ ಮರಣದ ಸುದ್ದಿ ಕೇಳಿ ಸಹಿಸಲಾಗದೇ ಪತ್ನಿ ಸೈದಾಬಿ ಸ್ಥಳದಲ್ಲೇ ಕುಸಿದು ಬಿದ್ದು ಹೃದಯಾಘಾತಕ್ಕೊಳಗಾಗಿದ್ದಾಳೆ. ಹೀಗಾಗಿ ಇಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.