ಕುಲ್ಲು :ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಭಾರಿ ಹಿಮಪಾತದಿಂದಾಗಿ ಪರ್ವತ ಬಂಡೆಗಳು ಸ್ಥಳಾಂತರಗೊಂಡಿದ್ದು, ನೂರಾರು ಕುರಿ ಮತ್ತು ಮೇಕೆಗಳು ಜೀವಂತವಾಗಿ ಹಿಮದಲ್ಲಿ ಹೂತು ಹೋಗಿವೆ.
ಹಿಮದಲ್ಲಿ ಸಜೀವವಾಗಿ ಹೂತು ಹೋದ ನೂರಾರು ಕುರಿ-ಮೇಕೆಗಳು ಕುಲ್ಲುವಿನಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಜನಜೀವನ ಸಹ ಅಸ್ತವ್ಯಸ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ 280 ಕುರಿ ಮತ್ತು ಮೇಕೆಗಳು ಕಾಣೆಯಾಗಿವೆ.
ಈ ವಿಷಯ ವರದಿಯಾದ ಕೂಡಲೇ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಮತ್ತು ಕೆಲವು ಕುರಿಗಳನ್ನು ಹಿಮದಿಂದ ಹೊರಗೆ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಕುರಿಗಾಹಿಗಳು ತಮ್ಮ ಕುರಿಗಳನ್ನು ಸುರಕ್ಷಿತವಾಗಿ ವಾಪಸ್ ಪಡೆದುಕೊಂಡಿದ್ದಾರೆ ಮತ್ತು ಹಿಮಪಾತದಿಂದಾಗಿ ಕೆಲವು ಕುರಿ ಮತ್ತು ಮೇಕೆಗಳು ಜೀವಂತವಾಗಿ ಹಿಮದಲ್ಲಿ ಹೂತು ಹೋಗಿವೆ ಎಂದು ಅಧಿಕಾರಿಯಾಗಿರೋ ಗುರುದಯಾಲ್ ಸಿಂಗ್ ತಿಳಿಸಿದ್ದಾರೆ.
ಘಟನೆ ಬಗ್ಗೆ ಮಾಹಿತಿ ಬಂದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯ ನಡೆಸಿ, ನಷ್ಟದ ಅಂದಾಜು ಮಾಡುತ್ತಿದ್ದಾರೆ. ಘಟನೆಯಲ್ಲಿ ಕುರಿ ಮತ್ತು ಮೇಕೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಬಹುದೆಂದು ಮೂಲಗಳು ತಿಳಿಸಿವೆ.