ಕೃಷ್ಣಗಿರಿ(ತಮಿಳುನಾಡು):ಶತ್ರು ರಾಷ್ಟ್ರ ಪಾಕಿಸ್ತಾನದಿಂದ ಮಿಡತೆಗಳು ರಾಜಸ್ಥಾನ, ಮಧ್ಯಪ್ರದೇಶಕ್ಕೆ ಪ್ರವೇಶಿಸಿ ಬೆಳೆಗಳಿಗೆ ಹಾನಿ ಮಾಡಿದ್ದವು. ಇದೀಗ ಉತ್ತರಭಾರತದಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವ ಬೆನ್ನಲ್ಲೇ ನಮ್ಮ ನೆರೆಯ ರಾಜ್ಯ ತಮಿಳುನಾಡಿನ ಮೇಲೆ ಮಿಡತೆಗಳು ದಾಳಿ ಮಾಡಿವೆ.
ಕೃಷ್ಣಗಿರಿ ಜಿಲ್ಲೆ ನೆರಳಗಿರಿ ಗ್ರಾಮದಲ್ಲಿ ನೂರಾರು ಮಿಡತೆಗಳು ಕಂಡುಬಂದಿವೆ. ಗ್ರಾಮದ ಸುತ್ತಮುತ್ತಲಿನ ಎಕ್ಕದ ಗಿಡಗಳ ಎಲೆಗಳನ್ನು ಸಂಪೂರ್ಣವಾಗಿ ತಿಂದುಹಾಕಿವೆ. ಅಲ್ಲದೇ, ಬಾಳೆ ಎಲೆಗಳ ಮೇಲೂ ಕುಳಿತುಕೊಂಡಿವೆ. ಇದರಿಂದ ಸ್ಥಳೀಯರಲ್ಲಿ ಭಯ ಭೀತಿ ಶುರುವಾಗಿದೆ.