ಕರ್ನಾಟಕ

karnataka

ETV Bharat / bharat

ಮಗುಚಿ ಬಿದ್ದ ಹಾಲಿನ ವಾಹನ: ಶ್ವಾನಗಳೊಂದಿಗೆ ಹಾಲು ಬಾಚಿಕೊಂಡ ವ್ಯಕ್ತಿ, ವಿಡಿಯೋ - ಆಗ್ರಾದಲ್ಲಿ ಹಾಲು

ಲಾಕ್​ಡೌನ್​ ಸಮಯದಲ್ಲಿ ದೇಶದ ಜನರು ತೊಂದರೆಗೆ ಒಳಗಾಗಬಾರದು ಎಂದು ಸರ್ಕಾರಗಳು ಸಕಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿವೆ. ಇದರ ಮಧ್ಯೆ ಕೂಡ ಜನರು ಹಸಿವಿನಿಂದ ಬಳಲುತ್ತಿದ್ದಾರೆ.

milk spill over road in agra
milk spill over road in agra

By

Published : Apr 13, 2020, 6:04 PM IST

Updated : Apr 13, 2020, 8:50 PM IST

ಆಗ್ರಾ:ಹಾಲಿನ ವಾಹನವೊಂದುಉತ್ತರಪ್ರದೇಶದ ಆಗ್ರಾದಲ್ಲಿ ಮಗುಚಿ ಬಿದ್ದಿದ್ದು, ಈ ವೇಳೆ ಶ್ವಾನಗಳೊಂದಿಗೆ ವ್ಯಕ್ತಿಯೋರ್ವ ಪಾತ್ರೆಯಲ್ಲಿ ಹಾಲು ತುಂಬಿಕೊಳ್ಳುತ್ತಿದ್ದ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್​​ ಆಗಿದೆ.

ಜನರ ಹೊಟ್ಟೆ ಸೇರಬೇಕಿದ್ದ ಹಾಲು ರಸ್ತೆಪಾಲು

ದೇಶದಲ್ಲಿ ಲಾಕ್​ಡೌನ್​​ ಹೇರಿ ಆದೇಶ ಹೊರಡಿಸಿದ್ದರಿಂದ ಅನೇಕರು ತೀವ್ರವಾಗಿ ತೊಂದರೆಗೆ ಸಿಲುಕಿದ್ದಾರೆ. ಕೆಲವರು ನಿತ್ಯದ ಊಟಕ್ಕೂ ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಅಂಥದ್ರಲ್ಲಿ ಆಹಾರ ಸಾಮಾಗ್ರಿಗಳು ಈ ರೀತಿ ಪೋಲಾಗುತ್ತಿರುವುದು ವಿಪರ್ಯಾಸ. ಹಾಲಿನ ಗಾಡಿ ಮಗುಚಿ ಬೀಳುತ್ತಿದ್ದಂತೆ ವ್ಯಕ್ತಿಯೋರ್ವ ಪಾತ್ರೆ ತೆಗೆದುಕೊಂಡು ಬಂದು ಅದರಲ್ಲಿ ತುಂಬಿಸಿಕೊಳ್ಳುತ್ತಿದ್ದು, ಇದರ ಹಿಂದೆ ಅನೇಕ ಶ್ವಾನಗಳು ಹಾಲು ಕುಡಿಯುತ್ತಿವೆ.

Last Updated : Apr 13, 2020, 8:50 PM IST

ABOUT THE AUTHOR

...view details