ಕರ್ನಾಟಕ

karnataka

ETV Bharat / bharat

ಶಾಲಾ ಯುನಿಫಾರ್ಮ್​ ಭಾಗವಾಗಲಿದೆ ಮಾಸ್ಕ್​; ಸಾಮಾಜಿಕ ಅಂತರವೂ ಕಡ್ಡಾಯ!! - ಸಿಬಿಎಸ್​ಇ

ಹೊಸ ವಿದ್ಯಾರ್ಥಿಗಳ ತರಗತಿಗಳು ಸೆಪ್ಟೆಂಬರ್​ನಿಂದ ಹಾಗೂ ಈಗಾಗಲೇ ಇರುವ ವಿದ್ಯಾರ್ಥಿಗಳ ತರಗತಿಗಳು ಆಗಸ್ಟ್​ನಿಂದ ಆರಂಭವಾಗಲಿವೆ. ಸೆಮಿಸ್ಟರ್​ ಪರೀಕ್ಷೆಗಳನ್ನು ಆನ್ಲೈನ್​ ಅಥವಾ ಆಫ್​​ಲೈನ್​ ಮೂಲಕ ನಡೆಸಬಹುದಾಗಿದೆ ಎಂದು ಯುಜಿಸಿ ಈಗಾಗಲೇ ತಿಳಿಸಿದೆ.

HRD formulating safety guidelines for schools
HRD formulating safety guidelines for schools

By

Published : May 1, 2020, 8:36 PM IST

ನವದೆಹಲಿ: ದೇಶಾದ್ಯಂತ ಶಾಲಾ, ಕಾಲೇಜುಗಳಲ್ಲೂ ಸಾಮಾಜಿಕ ಅಂತರದ ನಿಯಮ ಪಾಲನೆಯು ಕಡ್ಡಾಯವಾಗಲಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಕುರಿತ ನಿಯಮಾವಳಿಗಳನ್ನು ಸದ್ಯ ರೂಪಿಸುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಅಂತರ ಬಿಟ್ಟು ಕುಳಿತುಕೊಳ್ಳುವುದು, ಲೈಬ್ರರಿ ಹಾಗೂ ಮೆಸ್​ಗಳಲ್ಲಿ ಕುಳಿತುಕೊಳ್ಳುವ ವಿಧಾನಗಳಲ್ಲಿ ಬದಲಾವಣೆ ಮುಂತಾದ ನಿಯಮಗಳು ಜಾರಿಗೆ ಬರಲಿವೆ.

ಶೈಕ್ಷಣಿಕ ಸಂಸ್ಥೆಗಳು ಆರಂಭವಾದ ನಂತರ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಸೂಕ್ತ ಸಾಮಾಜಿಕ ಅಂತರ ನಿಯಮ ಪಾಲಿಸಸಬೇಕಾಗುತ್ತದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಶಾಲೆಗಳಿಗೆ ಸಂಬಂಧಿಸಿದಂತೆ ಬೆಳಗಿನ ಸಾಮೂಹಿಕ ಪ್ರಾರ್ಥನೆ, ಆಟೋಟಗಳು, ಶಾಲಾ ಬಸ್​ಗಳಲ್ಲಿನ ಆಸನ ವ್ಯವಸ್ಥೆ ಮುಂತಾದ ವಿಷಯಗಳಲ್ಲಿ ಕೆಲ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಇನ್ನು ಮಾಸ್ಕ್​ಗಳು ಶಾಲಾ ಯುನಿಫಾರ್ಮ್​ನ ಭಾಗವಾಗಲಿರುವುದು ವಿಶೇಷವಾಗಿದೆ. ಶಾಲಾ ಆವರಣಕ್ಕೆ ಹೊರಗಿನವರ ಪ್ರವೇಶ ನಿರ್ಬಂಧ, ಶಿಫ್ಟ್​ಗಳಲ್ಲಿ ತರಗತಿ ನಡೆಸುವುದು ಮುಂತಾದ ನಿಯಮಗಳು ಜಾರಿಯಾಗಬಹುದು.

ಹೊಸ ವಿದ್ಯಾರ್ಥಿಗಳ ತರಗತಿಗಳು ಸೆಪ್ಟೆಂಬರ್​ನಿಂದ ಹಾಗೂ ಈಗಾಗಲೇ ಇರುವ ವಿದ್ಯಾರ್ಥಿಗಳ ತರಗತಿಗಳು ಅಗಸ್ಟ್​ನಿಂದ ಆರಂಭವಾಗಲಿವೆ. ಸೆಮಿಸ್ಟರ್​ ಪರೀಕ್ಷೆಗಳನ್ನು ಆನ್ಲೈನ್​ ಅಥವಾ ಆಫ್​​ಲೈನ್​ ಮೂಲಕ ನಡೆಸಬಹುದಾಗಿದೆ ಎಂದು ಯುಜಿಸಿ ಈಗಾಗಲೇ ತಿಳಿಸಿದೆ. 10 ಹಾಗೂ 12 ನೇ ತರಗತಿಯ ಬಾಕಿ 29 ವಿಷಯಗಳ ಪರೀಕ್ಷೆಗಳು ನಂತರ ನಡೆಯಲಿರುವುದಾಗಿ ಸಿಬಿಎಸ್​ಇ ಹೇಳಿದ್ದರೂ, ದಿನಾಂಕಗಳನ್ನು ಮಾತ್ರ ಘೋಷಿಸಿಲ್ಲ.

ABOUT THE AUTHOR

...view details