ಹೈದರಾಬಾದ್ :ಬಿಸಿ ನೀರಿನ ಹಬೆಯನ್ನು ಉಸಿರಾಡುವ ಮೂಲಕ ಕೊರೊನಾ ವೈರಸ್‌ನ ದೂರವಿಡಬಹುದು ಎಂದು ಖ್ಯಾತ ಕ್ಯಾನ್ಸರ್ ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ. ಅಮೆರಿಕದ ಚಿಕಾಗೋನಲ್ಲಿರುವ ಸೇಂಟ್ ಕ್ಯಾಥರಿನ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಭರತ್ ಬರಾಯ್, ಹಬೆಯನ್ನು ಉಸಿರಾಡುವುದರಿಂದಾಗುವ ಆರೋಗ್ಯಕರ ಲಾಭಗಳನ್ನು ತಿಳಿಸಿದ್ದಾರೆ. ಅದರಲ್ಲೂ ಸೋಂಕು ಪೀಡಿತರ ಚಿಕಿತ್ಸೆಯಲ್ಲಿ ನಿರತರಾದವರಿಗೆ ಈ ಉಪಾಯ ಬಹಳ ಉಪಯುಕ್ತ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ಪೀಡಿತರಾಗಿದ್ದ ತಾವು ಕೆಲಸ ಮಾಡುವ ಆಸ್ಪತ್ರೆಯ ವೈದ್ಯರೊಬ್ಬರು ಹಬೆಯ ಉಸಿರಾಟದ ವಿಧಾನವನ್ನು ಅನುಸರಿಸುವ ಮೂಲಕ ಸಾಮಾನ್ಯಕ್ಕಿಂತ ಅರ್ಧ ಅವಧಿಯಲ್ಲಿಯೇ ಗುಣಮುಖರಾದರು. ಇಲ್ಲಿನ ಕೊರೊನಾ ಸೆಂಟರ್ನಲ್ಲಿ ಕೆಲಸ ಮಾಡುವ ವೈದ್ಯರು ಈಗ ಪ್ರತಿದಿನ ಹಬೆಯ ಉಸಿರಾಟದ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂದು ಡಾ. ಬರಾಯ್ ತಿಳಿಸಿದ್ದಾರೆ.