ನವದೆಹಲಿ/ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಶಿಯಾ ಪ್ರಾಬಲ್ಯದ ಪ್ರದೇಶವಾದ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಆಕ್ರಮಿಸಿಕೊಂಡಿದ್ದರಿಂದ, ಪಾಕಿಸ್ತಾನ ತನ್ನ ಜನಸಂಖ್ಯಾಶಾಸ್ತ್ರವನ್ನು ಬದಲಿಸಿದ್ದು, ಇದರ ಪರಿಣಾಮವಾಗಿ ಶಿಯಾ ಜನಸಂಖ್ಯೆಯನ್ನು 80 ರಿಂದ 39ಕ್ಕೆ ಇಳಿಸಲಾಗಿದೆ.
ಎನ್ ಸಿ ಬಿಪಿಂದ್ರ ನೇತೃತ್ವದ ನವದೆಹಲಿ ಮೂಲದ ಥಿಂಕ್ ಟ್ಯಾಂಕ್‌ನ ಲಾ ಅಂಡ್ ಸೊಸೈಟಿ ಅಲೈಯನ್ಸ್ ಇತ್ತೀಚೆಗೆ ನಡೆಸಿದ ಅಧ್ಯಯನವೊಂದರಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ ಜನಸಂಖ್ಯೆಯು ಈಗ ಸುಮಾರು 1.5 ಮಿಲಿಯನ್ ಆಗಿದ್ದು, ಸುಮಾರು 39 ಪ್ರತಿಶತ ಶಿಯಾ, 27 ಪ್ರತಿಶತ ಸುನ್ನಿ, 18 ಪ್ರತಿಶತ ಇಸ್ಮಾಯಿಲಿ ಮತ್ತು 16 ರಷ್ಟು ನೂರ್ಬಕ್ಷಿ ಜನರಿದ್ದಾರೆ.
ಈ ಹಿಂದೆ ಶಿಯಾ ಮುಸ್ಲಿಮರು 80 ಪ್ರತಿಶತದಷ್ಟು ಪಾಲನ್ನು ಈ ಪ್ರದೇಶದಲ್ಲಿ ಹೊಂದಿದ್ದರು. 1998 ರಲ್ಲಿ ನಡೆದ ಕೊನೆಯ ಜನಗಣತಿಯ ಪ್ರಕಾರ, ಗಿಲ್ಗಿಟ್-ಬಾಲ್ಟಿಸ್ತಾನ ಜನಸಂಖ್ಯೆಯು ಸುಮಾರು 8,70,000 ಆಗಿತ್ತು.
ಒಂದು ಸಮಯದಲ್ಲಿ ವಿಶ್ವದ ಬಹು-ಜನಾಂಗೀಯ, ಬಹುಸಾಂಸ್ಕೃತಿಕ ಮತ್ತು ಬಹು-ಭಾಷಾ ಪ್ರದೇಶಗಳಲ್ಲಿ ಒಂದಾದ ಗಿಲ್ಗಿಟ್-ಬಾಲ್ಟಿಸ್ತಾನ ಕಳೆದ ಏಳು ದಶಕಗಳಲ್ಲಿ ಪಾಕಿಸ್ತಾನ ಸೇನೆಯಿಂದ ತೀವ್ರ ಕಿರುಕುಳವನ್ನು ಎದುರಿಸಿದೆ.
'ಹ್ಯೂಮನ್ ಲೈವ್ಸ್ ಮ್ಯಾಟರ್: ಜೆ & ಕೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ / ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಮಾನವ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳ ತುಲನಾತ್ಮಕ ಅಧ್ಯಯನ ಮತ್ತು ವಿಶ್ಲೇಷಣೆ' ಎಂಬ ಶೀರ್ಷಿಕೆಯ ಅಡಿಯಲ್ಲಿ ವರದಿ ಸಲ್ಲಿಸಲಾಗಿದೆ. 1988ರಲ್ಲಿ ಈ ಪ್ರದೇಶದ ಸಂಸ್ಕೃತಿ ಮತ್ತು ಜನಾಂಗಕ್ಕೆ ಅತ್ಯಂತ ತೀವ್ರವಾದ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಮಿಲಿಟರಿ ಮತ್ತು ಕಾಶ್ಮೀರ ವ್ಯವಹಾರಗಳ ಫೆಡರಲ್ ಸಚಿವರ ಬೆಂಬಲದೊಂದಿಗೆ, ಈ ಪ್ರದೇಶದಲ್ಲಿ ದಾಳಿಗಳನ್ನು ನಡೆಸಿ ನೂರಾರು ಜನರನ್ನು ಉಗ್ರರು ಕೊಂದಿದ್ದಾರೆ.
16 ದಿನಗಳ ಕಾಲ ನಿರಂತರ ರಕ್ತಪಾತ ನಡೆದಿದೆ, 14 ಕ್ಕೂ ಹೆಚ್ಚು ಹಳ್ಳಿಗಳನ್ನು ಸುಡುವುದು ಮತ್ತು ಸ್ಥಳೀಯ ಮಹಿಳೆಯರಿಗೆ ಕಿರುಕುಳ ನೀಡಿದ ಈ ಘಟನೆಯನ್ನು 'ದಿ ಗಿಲ್ಗಿಟ್ ಹತ್ಯಾಕಾಂಡ' ಎಂದು ಕರೆಯಲಾಗುತ್ತದೆ.
"ಜನರನ್ನು ತಮ್ಮ ಮನೆಗಳಲ್ಲಿ ಜೀವಂತವಾಗಿ ಸುಡಲಾಯಿತು - ಅವರ ತಪ್ಪಿಗಾಗಿ ಅಲ್ಲ, ಆದರೆ ಅವರ ನಂಬಿಕೆಗಾಗಿ" ಎಂದು ವರದಿ ಹೇಳಿದೆ. 2013ರವರೆಗೆ ಸುಮಾರು 3,000 ಶಿಯಾಗಳನ್ನು ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ರಾಜ್ಯ ಪ್ರಾಯೋಜಿತ ಸುನ್ನಿ ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ.
2013 ರಲ್ಲಿ ಬಿಡುಗಡೆಯಾದ ಇಂಟರ್ನ್ಯಾಷನಲ್ ಹ್ಯೂಮನ್ ರೈಟ್ಸ್ ಅಬ್ಸರ್ವರ್ (ಐಹೆಚ್ಆರ್ಒ) ಗಿಲ್ಗಿಟ್-ಬಾಲ್ಟಿಸ್ತಾನ ಅಧ್ಯಾಯದ ವರದಿಯು 1988 ರಿಂದೀಚೆಗೆ ಸುಮಾರು 3,000 ಜನರು ಪಂಥೀಯ ಹಿಂಸಾಚಾರದಲ್ಲಿ ಬಲಿಯಾಗಿದ್ದಾರೆ ಎಂದು ಹೇಳಿದೆ. ಪ್ರಾಣಹಾನಿ ಮತ್ತು ಅದರ ಪ್ರಭಾವದ ಮೇಲೆ, ಸುಮಾರು 900 ಮಹಿಳೆಯರು ವಿಧವೆಯರಾಗಿದ್ದಾರೆ ಮತ್ತು ಸುಮಾರು 2,500 ಮಕ್ಕಳು ಅನಾಥರಾಗಿದ್ದಾರೆ ಎಂದು ಅದು ಹೇಳಿದೆ. ಆಸ್ತಿಪಾಸ್ತಿಗೆ ಆಗುವ ನಷ್ಟವನ್ನು ಅಳೆಯಲಾಗದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಗಸ್ಟ್ 16, 2012 ರಂದು,ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಶಿಯಾ ಮುಸ್ಲಿಮರ 'ಉದ್ದೇಶಿತ ನರಮೇಧ'ದ ಕೃತ್ಯದಲ್ಲಿ, ಒಂದು ಡಜನ್ಗೂ ಹೆಚ್ಚು ಬಂದೂಕುಧಾರಿಗಳು ನಾಲ್ಕು ಬಸ್ಗಳಲ್ಲಿದ್ದ 19 ಪ್ರಯಾಣಿಕರನ್ನು, ಹೆಚ್ಚಾಗಿ ಶಿಯಾಗಳನ್ನು ಬಲವಂತವಾಗಿ ಹೊಡೆದು ಗುಂಡು ಹಾರಿಸಿ ಹತ್ಯೆ ಮಾಡಿದರು. ಒಂದು ಘಟನೆಯಲ್ಲಿ, ಫೆಬ್ರವರಿ 28, 2012 ರಂದು ಇರಾನ್‌ನಿಂದ ಹಿಂದಿರುಗುತ್ತಿದ್ದಾಗ ಕೊಹಿಸ್ತಾನ್ ಜಿಲ್ಲೆಯ ಕರಕೋರಂ ಹೆದ್ದಾರಿಯಲ್ಲಿ 18 ಶಿಯಾ ಯಾತ್ರಿಕರು ಬಹಿರಂಗವಾಗಿ ಕೊಲ್ಲಲಾಯಿತು.