ಕರ್ನಾಟಕ

karnataka

ETV Bharat / bharat

ಕೇಂದ್ರದ ಅನುಮತಿಗಾಗಿ ಕಾಯುತ್ತಿವೆ 14 ಮಾದರಿಯ ಕೊರೊನಾ ಟೆಸ್ಟಿಂಗ್‌ ಕಿಟ್‌ಗಳು.. - ಯುಎಸ್​ಎಫ್​ಡಿಎ

ಜಗತ್ತಿನಾದ್ಯಂತ ಕೊರೊನಾ ಪತ್ತೆ ಪರೀಕ್ಷೆಗಳು ಕಡಿಮೆಯಾಗಿರುವುದಕ್ಕೆ ಕೊರೊನಾ ಟೆಸ್ಟಿಂಗ್​ ಕಿಟ್​ಗಳ ಕೊರತೆಯೂ ಪ್ರಮುಖ ಕಾರಣ. ಪರೀಕ್ಷೆಗಳಿಗೆ ಅನುಮತಿ ನೀಡುವಲ್ಲಿ ವಿಳಂಬ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡು ಅಗತ್ಯ ಸಲಕರಣೆಗಳ ಪೂರೈಕೆಯಾಗದಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಯುಎಸ್​ಎಫ್​ಡಿಎ ಹಾಗೂ ಸಿಇ-ಯುರೋಪ್​ ಪ್ರಮಾಣೀಕೃತ ಟೆಸ್ಟಿಂಗ್​ ಕಿಟ್​ಗಳನ್ನು ಮಾತ್ರ ಬಳಸುವಂತೆ ನಿರ್ದೇಶನ ನೀಡಿರುವುದರಿಂದ ಸ್ಥಳೀಯ ಟೆಸ್ಟಿಂಗ್ ಕಿಟ್​ ಉತ್ಪಾದಕರಿಗೆ ಬೆಲೆ ಇಲ್ಲದಂತಾಗಿದೆ.

Corona Detection Test
Corona Detection Test

By

Published : Apr 6, 2020, 4:17 PM IST

136 ಕೋಟಿಯಷ್ಟು ಬೃಹತ್​ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಈವರೆಗೆ ಕೇವಲ 1,50,000 ಕೊರೊನಾ ಪತ್ತೆ ಟೆಸ್ಟ್​ಗಳನ್ನು ಮಾಡಲಾಗಿದೆ. ಸರ್ಕಾರದಿಂದ ಗುರುತಿಸಲಾದ 51 ಲ್ಯಾಬ್​ಗಳಲ್ಲಿ ಈ ಟೆಸ್ಟ್​ಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಪ್ರತಿದಿನ ಒಟ್ಟಾರೆ 10,000 ಟೆಸ್ಟ್​ಗಳು ನಡೆಯುತ್ತಿವೆ.

ಕೊರೊನಾ ಶಂಕಿತರನ್ನು ತಕ್ಷಣ ಗುರುತಿಸಿ ಪ್ರತ್ಯೇಕಿಸಿ ಚಿಕಿತ್ಸೆ ನೀಡುವುದನ್ನು ಯುದ್ಧೋಪಾದಿಯಲ್ಲಿ ಮಾಡಬೇಕಿದೆ ಎನ್ನುತ್ತಾರೆ ವೈದ್ಯಕೀಯ ರಂಗದ ಪರಿಣಿತರು. ಆದರೆ, ಅಭಿವೃದ್ಧಿ ಹೊಂದಿದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೈಗೊಳ್ಳಲಾಗುತ್ತಿರುವ ಟೆಸ್ಟ್​ಗಳ ಸಂಖ್ಯೆ ತೀರಾ ವಿರಳ. ಕೊರೊನಾ ಪತ್ತೆ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸದಿದ್ದಲ್ಲಿ ಸೋಂಕಿತರ ನಿಖರ ಅಂಕಿ-ಅಂಶಗಳನ್ನು ಹೊಂದಲು ಸಾಧ್ಯವಾಗದು. ಕೊರೊನಾ ಸೋಂಕಿನ ಅತ್ಯಂತ ಕಡಿಮೆ ಲಕ್ಷಣ ತೋರುವ ಪ್ರಕರಣಗಳನ್ನು ಸಹ ಗಂಭೀರವಾಗಿ ಪರಿಗಣಿಸಬೇಕಿದೆ ಎನ್ನುತ್ತಾರೆ ವೈದ್ಯಕೀಯ ತಜ್ಞರು.

ಜಗತ್ತಿನಾದ್ಯಂತ ಕೊರೊನಾ ಪತ್ತೆ ಪರೀಕ್ಷೆಗಳು ಕಡಿಮೆಯಾಗಿರುವುದಕ್ಕೆ ಕೊರೊನಾ ಟೆಸ್ಟಿಂಗ್​ ಕಿಟ್​ಗಳ ಕೊರತೆಯೂ ಪ್ರಮುಖ ಕಾರಣ. ಪರೀಕ್ಷೆಗಳಿಗೆ ಅನುಮತಿ ನೀಡುವಲ್ಲಿ ವಿಳಂಬ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಂಡು ಅಗತ್ಯ ಸಲಕರಣೆಗಳ ಪೂರೈಕೆಯಾಗದಿರುವುದರಿಂದ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಯುಎಸ್​ಎಫ್​ಡಿಎ ಹಾಗೂ ಸಿಇ-ಯುರೋಪ್​ ಪ್ರಮಾಣೀಕೃತ ಟೆಸ್ಟಿಂಗ್​ ಕಿಟ್​ಗಳನ್ನು ಮಾತ್ರ ಬಳಸುವಂತೆ ನಿರ್ದೇಶನ ನೀಡಿರುವುದರಿಂದ ಸ್ಥಳೀಯ ಟೆಸ್ಟಿಂಗ್ ಕಿಟ್​ ಉತ್ಪಾದಕರಿಗೆ ಬೆಲೆ ಇಲ್ಲದಂತಾಗಿದೆ.

ಈ ಎಲ್ಲ ಕಾರಣಗಳಿಂದ ಕೊರೊನಾ ಪತ್ತೆ ಪರೀಕ್ಷೆಗಳಿಗೆ ಅಡ್ಡಿಯುಂಟಾಗುತ್ತಿರುವುದನ್ನು ಪರಿಗಣಿಸಿದ ಸರ್ಕಾರ, ಪುಣೆಯ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿಯಿಂದ ಪ್ರಮಾಣೀಕೃತ ಕಿಟ್​ಗಳನ್ನು ಬಳಸಲು ಅನುಮತಿ ನೀಡಿದೆ. ಒಂದು ಟೆಸ್ಟ್​ನ ಫಲಿತಾಂಶ ಬರಲು ಪ್ರಸ್ತುತ 6 ರಿಂದ 7 ತಾಸು ಹಿಡಿಯುತ್ತಿದೆ. ಆಧುನಿಕ ಟೆಸ್ಟಿಂಗ್​ ಕಿಟ್​ಗಳನ್ನು ಬಳಸಿದಲ್ಲಿ ಎರಡೂವರೆ ತಾಸುಗಳಲ್ಲಿ ಫಲಿತಾಂಶ ಪಡೆಯಬಹುದು. ಇನ್ನೂ 14 ಮಾದರಿಯ ಟೆಸ್ಟಿಂಗ್​ ಕಿಟ್​ ಮಾಡೆಲ್​ಗಳು ಸರ್ಕಾರದ ಅನುಮತಿಗಾಗಿ ಕಾಯುತ್ತಿವೆ.

ABOUT THE AUTHOR

...view details