ಮುಜಫರ್ಪುರ: ಎನ್‌ಸೆಫಾಲಿಟಿಸ್ ಸಿಂಡ್ರೋಮ್ನಿಂದ 100 ಮಕ್ಕಳು ಮೃತಪಟ್ಟಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಬಿಹಾರದ ಆರೋಗ್ಯ ಸಚಿವ ಕ್ರಿಕೆಟ್ ಸ್ಕೋರ್ ಕೇಳಿದ್ದು ವಿವಾದಕ್ಕೀಡಾಗಿದೆ.
ನೂರು ಮಕ್ಕಳ ಸಾವಿನ ಚರ್ಚೆಯಲ್ಲಿ ಕ್ರಿಕೆಟ್ ಸ್ಕೋರ್ ಕೇಳಿದ ಸಚಿವ: ವಿಡಿಯೋ ವೈರಲ್ - undefined
ಬಿಹಾರದಲ್ಲಿ 100 ಮಕ್ಕಳು ಮೃತಪಟ್ಟಿರುವುದು ಸೇರಿ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ, ಭಾರತ-ಪಾಕಿಸ್ತಾನ ಪಂದ್ಯದ ಸ್ಕೋರ್ ಕೇಳಿದ ವಿಡಿಯೋ ವೈರಲ್ ಆಗಿದೆ.
ಬಿಹಾರದಲ್ಲಿ 100 ಮಕ್ಕಳು ಮೃತಪಟ್ಟಿರುವುದು ಸೇರಿ ಮಹತ್ವದ ವಿಚಾರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಭಾನುವಾರ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ, ಭಾರತ-ಪಾಕಿಸ್ತಾನ ಪಂದ್ಯದ ಸ್ಕೋರ್ ಕೇಳಿದ ವಿಡಿಯೋ ವೈರಲ್ ಆಗಿದೆ. ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಚಿವರು, ಎಷ್ಟು ವಿಕೆಟ್ ಹೋದವು? ಎಂಬ ಪ್ರಶ್ನೆಗೆ ನಾಲ್ಕು ಎಂದು ಕೆಲವರು ಉತ್ತರಿಸಿದರು.
ಗಂಭೀರ ವಿಚಾರಗಳ ಚರ್ಚೆ ನಡೆಯುವಾಗ ಕ್ರಿಕೆಟ್ ಸ್ಕೋರ್ ಕೇಳಿದ್ದು ಸರಿಯಲ್ಲ ಎಂದು ಕಾಂಗ್ರೆಸ್, ಆರ್ಜೆಡಿ, ಹಿಂದೂಸ್ತಾನ್ ಆವಂ ಮೋರ್ಚಾ ಸೇರಿ ಎಡ ರಂಗಗಳು ಕಿಡಿಕಾರಿವೆ. ಪಾಂಡೆ ರಾಜೀನಾಮೆ ನೀಡಬೇಕೆಂದು ಒತ್ತಾಯ ಮಾಡಿವೆ. ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟ್ವಿಟರ್ ಮೂಲಕ ಟೀಕಿಸಿದ್ದಾರೆ.