ಕರ್ನಾಟಕ

karnataka

ETV Bharat / bharat

ಗಾಂಧೀಜಿಯವರು ಹೇಗೆ ರಾಷ್ಟ್ರಪಿತರಾದರು...?

ಮೋಹನ್​ದಾಸ್​ ಕರಮಚಂದ ಗಾಂಧಿ ರಾಷ್ಟ್ರಪಿತರಾಗಿದ್ದು ಯಾವಾಗ.. ಈ ಬಿರುದನ್ನ ನೀಡಿದ್ದು ಯಾರು? ಅವರು ದೇಶವನ್ನ ಚುಂಬಕ ಶಕ್ತಿಯಂತೆ ಒಗ್ಗೂಡಿಸಿದ್ದು ಹೇಗೆ..

ಮಹಾತ್ಮ ಗಾಂಧೀಜಿ

By

Published : Aug 16, 2019, 10:30 AM IST

ನವದೆಹಲಿ:ಮೊಟ್ಟ ಮೊದಲು ಮಹಾತ್ಮ ಗಾಂಧೀಜಿಯವರನ್ನು "ರಾಷ್ಟ್ರಪಿತ" ಎಂದು ಕರೆದವರು ನೇತಾಜಿ ಸುಭಾಶ್ ಚಂದ್ರ ಬೋಸ್. ಬಳಿಕ ಸ್ವತಂತ್ರ ಭಾರತದ ಸಂಸತ್ತು ಅಧಿಕೃತವಾಗಿ ಮಹಾತ್ಮ ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಘೋಷಿಸಿತು. ಸಾಮಾನ್ಯವಾಗಿ, ಸ್ವತಂತ್ರ ದೇಶದ ಮೊದಲ ರಾಷ್ಟ್ರಪತಿಗೆ ಅಂತಹ ಬಿರುದು ನೀಡಲಾಗುತ್ತದೆ. ಗಾಂಧೀಜಿಯವರು ಅಂತಹ ಸ್ಥಾನವನ್ನು ಹೊಂದಿರಲಿಲ್ಲ, ಮತ್ತು ಅದಕ್ಕಾಗಿ ಅವರು ಇರಲೂ ಇಲ್ಲ.

ಬೋಸ್​​ ಗಾಂಧೀಜಿ ಅವರನ್ನ ಫಾದರ್​ ಆಫ್​ ನೇಷನ್​ ಅಂತಾ ಕರೆದಿದ್ದೇಕೆ?
ಸುಭಾಶ್ಚಂದ್ರ ಬೋಸ್ ಗಾಂಧೀಜಿ ಅವರನ್ನ ರಾಷ್ಟ್ರಪಿತ ಎಂದು ಕರೆಯಲು ಕಾರಣ, ಗಾಂಧೀಜಿ ಭಾರತವನ್ನು ಒಂದು ರಾಷ್ಟ್ರವನ್ನಾಗಿ ಒಗ್ಗೂಡಿಸಿದ್ದನ್ನು ಅವರು ನೋಡಿದ್ದರು. ಗಾಂಧೀ ಭಾರತವನ್ನು ಭೌಗೋಳಿಕ ಮತ್ತು ರಾಜಕೀಯ ಚೌಕಟ್ಟಿನೊಳಗೆ ನಿರ್ಮಾಣ ಮಾಡಿದ್ದರು. ಅದು ಭಾವನಾತ್ಮಕ ಮತ್ತು ಏಕತೆ ಆಧಾರದ ಮೇಲೆ ಕಟ್ಟಲಾಗಿತ್ತೇ ಹೊರತು ಇತಿಹಾಸದ ಆಧಾರದಲ್ಲಿ ಅಲ್ಲ. ಕೆಲವು ರಾಷ್ಟ್ರಗಳು ಅದರ ಸಾಮಾನ್ಯ ಭಾಷೆಯಿಂದಾಗಿ ಮತ್ತು ಜನರ ಧರ್ಮದಿಂದಾಗಿ ಭಾವನಾತ್ಮಕ ಐಕ್ಯತೆಯನ್ನು ಸಾಧಿಸಿದೆ. ಸಾಮಾನ್ಯ ಭಾಷೆಯಿಂದಾಗಿ ಭಾವನಾತ್ಮಕ ಐಕ್ಯತೆಯನ್ನು ಸಾಧಿಸಿದಕ್ಕೆ ಬಾಂಗ್ಲಾದೇಶವು ಉದಾಹರಣೆಯಾದರೆ, ಸಾಮಾನ್ಯ ಧರ್ಮವು ಪಾಕಿಸ್ತಾನದ ಅಡಿಪಾಯವಾಗಿದೆ.

ಸಂಸತ್​​ ರಾಷ್ಟ್ರಪಿತ ಎಂದು ಕರೆದಿದ್ದೂ ಇದೇ ಕಾರಣಕ್ಕೆ!
ಭಾರತದಲ್ಲಿ ಅನೇಕ ಭಾಷೆಗಳಿದ್ದವು. ನಾವು ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸಿದ್ದು ಭಾವನಾತ್ಮಕ ಐಕ್ಯತೆಯಿಂದಾಗಿ. ಬ್ರಿಟಿಷರ ಗುಲಾಮಗಿರಿಯಿಂದ ವಿಮೋಚನೆ ಹೊಂದಬೇಕು ಎಂಬ ಹಂಬಲದಿಂದಾಗಿ. ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದ ಮೊದಲ ನಾಯಕ ಗಾಂಧೀಜಿ ಅಲ್ಲ. ಇನ್ನೂ ಅನೇಕರು ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದ್ದಾರೆ. ಹಾಗಾದರೆ ಸ್ವತಂತ್ರ ಭಾರತದ ಸಂಸತ್ತು ಗಾಂಧೀಜಿಯನ್ನು ಮಾತ್ರ ರಾಷ್ಟ್ರದ ಪಿತಾಮಹ ಎಂದು ಅಧಿಕೃತವಾಗಿ ಘೋಷಿಸಲು ಏಕೆ ನಿರ್ಧರಿಸಿತು?

ಸ್ವತಂತ್ರ ಚಳವಳಿಗಾಗಿ ಪಾತ್ರೆ ಪಗಡೆಯನ್ನೂ ಮಾರಿದ್ದರು ಗಾಂಧೀಜಿ.. ನಿಮಗೆ ಗೊತ್ತಾ ಆ ದಿನಗಳ ಕಥಾನಕ?

ಭಾವನಾತ್ಮಕ ಐಕ್ಯತೆ ಸಾರಿದ್ದು ಇದೇ ಕಾರಣಕ್ಕೆ?
ರಾಷ್ಟ್ರೀಯತೆಯನ್ನು ತುಂಬುವ ಮೂಲಕ ಭಾರತದಂತಹ ವಿಶಾಲ ಭೂಮಿಯಲ್ಲಿ, ವೈವಿಧ್ಯಮಯ ಜನರಲ್ಲಿ, ಭಾವನಾತ್ಮಕ ಐಕ್ಯತೆಯನ್ನು ತುಂಬಿದ ಹೆಗ್ಗಳಿಕೆ ಗಾಂಧೀಜಿಯವರಿಗೆ ಸಲ್ಲುತ್ತದೆ. ಸಾಮಾನ್ಯರಲ್ಲಿ ಸಾಮಾನ್ಯ ಜನರೊಂದಿಗೆ ಬಲವಾದ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸುವ ಮೂಲಕ ಅವರು ಇದನ್ನು ಸಾಧಿಸಿದ್ದರು. ಅವರ ಹೆಸರು, ವಿಳಾಸ ಮತ್ತು ಉದ್ಯೋಗವನ್ನು ಅಹಮದಾಬಾದ್‌ನ ವಿಶೇಷ ನ್ಯಾಯಾಲಯ ಕೇಳಿದಾಗ, ಗಾಂಧೀಜಿ ನಾನು ರೈತ ಮತ್ತು ನೇಕಾರ ಎಂದು ಸರಳವಾಗಿ ಹೇಳಿದವರು. ಹಾಗೆ ಹೇಳುವ ಮೂಲಕ, ದೇಶದ ಲಕ್ಷಾಂತರ ದುಡಿಯುವ ರೈತರು ಮತ್ತು ನೇಕಾರರ ಹೃದಯದಲ್ಲಿ ಜಾಗ ಪಡೆದವರು.ತನ್ನದೇ ಆದ ಸರಳ ಜೀವನಶೈಲಿಯಿಂದಾಗಿ ಜನ ಸಾಮಾನ್ಯರೊಂದಿಗೆ ಸಂಬಂಧವನ್ನು ಬೆಳೆಸಿದವರು. ಗಾಂಧೀಜಿಯವರು ಖಾದಿ ಬಟ್ಟೆ ಧರಿಸಿದವರು, ಛರಕ ತಿರುಗಿಸಿದವರು, ತನ್ನೆರಡು ಕೈಗಳನ್ನು ಮಣ್ಣಾಗಿಸಿದವರು. ಶ್ರೀಮಂತ ಕುಟುಂಬಗಳಿಂದ ಬಂದ ಇತರ ರಾಜಕೀಯ ನಾಯಕರಂತೆ ಆಗದೆ, ಸಾಬರಮತಿ ಮತ್ತು ಸೆವಾ ಗ್ರಾಮ್‌ನಲ್ಲಿರುವ ಆಶ್ರಮಗಳಲ್ಲಿ ಶೌಚಾಲಯವನ್ನು ಸ್ವಚ್ಚಗೊಳಿಸಿದವರು.

ಜನಸಾಮಾನ್ಯರೊಂದಿಗೆ ಗಾಂಧೀಜಿ ನಡೆದುಕೊಳ್ಳುತ್ತಿದ್ದು ಹೀಗೆ!
ಗಾಂಧೀಜಿಯವರು ಸಾಮಾನ್ಯ ಜನರೊಂದಿಗಿನ ಒಡನಾಟಕ್ಕೆ ಮತ್ತೊಂದು ಕಾರಣವೆಂದರೆ, ಅವರ ಸಂವಹನ ಭಾಷೆ. ಇಂಗ್ಲಿಷ್ ಅಥವಾ ಸಂಸ್ಕೃತೀಕರಿಸಿದ ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಗಳನ್ನು ಉತ್ತಮ ರೀತಿಯಲ್ಲಿ ಮಾತನಾಡಲು ಆದ್ಯತೆ ನೀಡಿದವರು. ಇತರ ರಾಜಕೀಯ ಮುಖಂಡರಿಗಿಂತ ಭಿನ್ನವಾಗಿ, ಗಾಂಧೀಜಿ ಸರಳ ಹಿಂದಿ ಅಥವಾ ಗುಜರಾತಿ ಭಾಷೆಯಲ್ಲಿ ಮಾತನಾಡಿದವರು. ಸಾರ್ವಜನಿಕ ಸಭೆಗಳಲ್ಲಿ ವೇದಿಕೆ ಹಂಚಿಕೊಂಡ ಇತರ ರಾಜಕೀಯ ನಾಯಕರು ಕೂಡ ತಮ್ಮ ಮಾತೃಭಾಷೆಯಲ್ಲೇ ಭಾಷಣ ಮಾಡಬೇಕೆಂದು ಗಾಂಧೀಜಿ ಒತ್ತಾಯಿಸುತ್ತಿದ್ದರು.

ಮಹಾತ್ಮ ಗಾಂಧೀಜಿ

ಪ್ರಾದೇಶಿಕ ಭಾಷೆಗೆ ರಾಷ್ಟ್ರಪಿತನ ಒತ್ತು!
ಗುಜರಾತ್‌ನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಗಾಂಧೀಜಿಯವರು ಮೊಹಮ್ಮದ್ ಅಲಿ ಜಿನ್ನಾಗೆ ಗುಜರಾತಿ ಭಾಷೆಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದರು. ಆದರೆ ಜಿನ್ನಾ ಮಾತ್ರ ಇಂಗ್ಲಿಷ್‌ನಲ್ಲಿ ಮಾತನಾಡಿದ್ದರು. ಅದೇ ರೀತಿ ಬಂಗಾಳದ ಹಳ್ಳಿಯೊಂದರಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸುರೇಂದ್ರ ನಾಥ್ ಬ್ಯಾನರ್ಜಿಯನ್ನು ಬಂಗಾಳಿ ಭಾಷೆಯಲ್ಲಿ ಮಾತನಾಡುವಂತೆ ಗಾಂಧೀಜಿ ಒತ್ತಾಯ ಮಾಡಿದ್ದರು.

ಉತ್ತಮ ಸಂವಹನಾಕಾರರಾಗಿದ್ದರು ಮೋಹನದಾಸ
ಗಾಂಧೀಜಿಯವರು ಎಂದಿಗೂ ಮಾತಿನ ಚಕಮಕಿಯಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಉತ್ತಮ ವಾಗ್ಮಿಗಳಲ್ಲದಿದ್ದರೂ ಭಾಷೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಉತ್ತಮ ಸಂವಹನಕಾರರಾಗಿದ್ದರು.

ರಾಷ್ಟ್ರೀಯತೆ ಬಿತ್ತಿದ್ದು ಈ ಕಾರಣಕ್ಕೆ!
ಗಾಂಧೀಜಿಯವರು ರಾಷ್ಟ್ರೀಯತೆ ಭಾವನೆಯನ್ನು ಜನರಲ್ಲಿ ಹರಡಲು ಮತ್ತೊಂದು ಕಾರಣವೆಂದರೆ, ಸತ್ಯಾಗ್ರಹ ಚಳವಳಿಯಲ್ಲಿ ಮಹಿಳೆಯರು ಪಾಲ್ಗೊಳ್ಳುವಂತೆ ಮಾಡುವುದು. ಐತಿಹಾಸಿಕ ಉಪ್ಪಿನ ಸತ್ಯಾಗ್ರಹ, ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸುವ ಆಂದೋಲನ ಮತ್ತು ಅಸಹಕಾರ ಚಳವಳಿಯಲ್ಲಿ ದೇಶಾದ್ಯಂತ ಲಕ್ಷಾಂತರ ಮಹಿಳೆಯರು ಭಾಗವಹಿಸಿದ್ದರು. ಈ ಅಹಿಂಸಾತ್ಮಕ ಅಭಿಯಾನಗಳಲ್ಲಿ ಸಾವಿರಾರು ಮಹಿಳಾ ಸ್ವಯಂಸೇವಕರು ಬಂಧನಕ್ಕೊಳಗಾಗಿದ್ದರು.

ಮಹಿಳೆಯರನ್ನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಸಿದ್ದ ಈ ಚುಂಬಕ ಶಕ್ತಿ
ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಸತ್ಯಾಗ್ರಹ ಚಳವಳಿಯಿಂದ ಸಜ್ಜುಗೊಂಡಿದ್ದರು. ಗಾಂಧೀಜಿಯವರು ಹಿಂದೂ-ಮುಸ್ಲಿಂ ಐಕ್ಯತೆಯನ್ನು ಸಾಧಿಸಲು ದಣಿವರಿಯದೇ ಶ್ರಮಿಸಿದರು, ಆದರೆ, ಅಂತಿಮವಾಗಿ ಜನವರಿ 30, 1948 ರಂದು ಹಿಂದೂ ಮತಾಂಧರಿಂದ ಅವರ ಹತ್ಯೆಯಾಯಿತು.

ಅಸ್ಪೃಶ್ಯತೆಯನ್ನು ತೆಗೆದು ಹಾಕುವುದೇ ಇವರ ಉದ್ದೇಶ
ಹಿಂದೂಗಳಲ್ಲಿರುವ ಅಸ್ಪೃಶ್ಯತೆಯನ್ನು ತೆಗೆದು ಹಾಕುವುದು ಗಾಂಧೀಜಿಯವರ ಮತ್ತೊಂದು ಉದ್ದೇಶವಾಗಿತ್ತು. ಈ ಉದ್ದೇಶಕ್ಕಾಗಿ ಅವರು ಹರಿಜನ ಸೇವಾ ಸಂಘವನ್ನು ಸ್ಥಾಪಿಸಿದರು. ಮತ್ತು ತಮ್ಮ ಮೇಲ್ಜಾತಿಯ ಸಹೋದ್ಯೋಗಿಗಳಿಗೆ ಚರ್ಮದ ಕೆಲಸಗಳನ್ನು ಮಾಡುವಂತೆ ಪ್ರೋತ್ಸಾಹಿಸಿದರು, ಇದು ಮೇಲ್ಜಾತಿಯ ಹಿಂದೂಗಳಿಗೆ ಸಾಮಾನ್ಯವಾಗಿ ದೂರವಿದ್ದ ಕೆಲಸವಾಗಿತ್ತು.

ರಾಷ್ಟ್ರೀಯ ಏಕತೆ ಇವರ ಮೂಲ ಗುರಿ

ಅವರ ಸರ್ವ ಕಾರ್ಯಗಳ ಉದ್ದೇಶ ರಾಷ್ಟ್ರೀಯ ಏಕತೆ ಮತ್ತು ಸ್ವಾತಂತ್ರ್ಯ ಹೋರಾಟವಾಗಿತ್ತು ಮತ್ತು ಧರ್ಮ, ಜಾತಿ, ಭಾಷೆ ಮತ್ತು ಲಿಂಗ ಹಾಗೂ ವೈವಿಧ್ಯಮಯ ಹಿನ್ನೆಲೆಯ ಜನರನ್ನು ಸಜ್ಜುಗೊಳಿಸುವುದಾಗಿತ್ತು. ಇದಕ್ಕಾಗಿ 1915 ರಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನಂತರ ದೇಶಾದ್ಯಂತ ಒಂದು ವರ್ಷ ಪಯಣಿಸಿದರು. ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ಸಾಮಾನ್ಯ ಜನರನ್ನು ಮತ್ತು ನಾಯಕರನ್ನು ಭೇಟಿಯಾದರು. ತಮ್ಮ ಆಶ್ರಮವನ್ನು ಅಹಮದಾಬಾದ್‌ನಲ್ಲಿ ಸ್ಥಾಪಿಸಿದರು. ಅದಕ್ಕಾಗಿ ಆಶ್ರಮ ವಾಸಿಗಳು ಬ್ರಹ್ಮಚರ್ಯ ಒಳಗೊಂಡಂತೆ ಹನ್ನೊಂದು ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಿದರು.

ಗಾಂಧೀಜಿ ಏನು ಬೋಧಿಸಿದರು, ಅವರು ತಮ್ಮ ಜೀವನದಲ್ಲಿ ಏನು ಗಮನಿಸಿದರು. ಅದು ಅವರನ್ನು ಇತರ ರಾಜಕೀಯ ಮುಖಂಡರಿಗಿಂತ ಭಿನ್ನವಾಗಿಸಿತು. ಮತ್ತು ಅವರನ್ನು ಮಹಾತ್ಮನನ್ನಾಗಿ ಮಾಡಿತು ಮತ್ತು ರಾಷ್ಟ್ರ ಪಿತನಾಗುವಂತೆ ಮಾಡಿತು.

- ನಚಿಕೇತ

ABOUT THE AUTHOR

...view details