ಹೈದರಾಬಾದ್: ಹ್ಯೂಸ್ಟನ್ನಲ್ಲಿ ನಡೆದ ಮೋದಿ- ಟ್ರಂಪ್ ಸಭೆಯಿಂದ ಭಾರತ ಮತ್ತು ಅಮೆರಿಕದ ವ್ಯಾಪಾರ ಸಂಬಂಧಗಳು ಪ್ರಗತಿಯಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಬೆನ್ನೆಲೆ ಕ್ಯಾಲಿಫೋರ್ನಿಯಾದಿಂದ ವಾಷಿಂಗ್ಟನ್ ಡಿಸಿಗೆ ಹಿಂದಿರುಗುವಾಗ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏರ್ ಫೋರ್ಸ್ ಒನ್ನಲ್ಲಿ ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ಧ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಮೋದಿ ಮತ್ತು ಟ್ರಂಪ್ 50,000 ಅನಿವಾಸಿ ಭಾರತೀಯನ್ನು ಭೇಟಿ ಮಾಡಿ, ಅವರನ್ನು ಕುರಿತು ಭಾಷಣ ಕೂಡ ಮಾಡಿದ್ರು. ಬಳಿಕ ಉಭಯ ನಾಯಕರು ಎರಡನೇ ಸುತ್ತಿನ ಸಭೆಯನ್ನು ನಡೆಸಿದ್ರು. ಇದರಲ್ಲಿ ಟ್ರಂಪ್ ಭಾರತದೊಂದಿಗೆ ಅಮೆರಿಕ ಹೊಂದಿರುವ 30 ಬಿಲಿಯನ್ ಡಾಲರ್ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡುವ ಬಗ್ಗೆ ಅಧ್ಯಕ್ಷ ಟ್ರಂಪ್ ತಿಳಿಸಿದ್ರು.
ಈ ಕುರಿತು ಮಾತನಾಡಿದ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಎರಡು ದೇಶಗಳು ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಯನ್ನು ನಡೆಸುತ್ತಿವೆ. ಇದರ ಬಗ್ಗೆ ಸದ್ಯದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಲ್ಲದೇ ಅಮೆರಿಕನ್ ವಸ್ತುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುತ್ತಿರುವ ಬಗ್ಗೆ ಟ್ರಂಪ್ ಗಮನಕ್ಕೆ ಬಂದಿದೆ. ಇದರ ಮೇಲೂ ಅವರೊಂದು ಕಣ್ಣಿಟ್ಟಿದ್ದು, ಸುಂಕ ಕಡಿತದ ಬಗ್ಗೆ ಚಿಂತಿಸಲಾಗುತ್ತಿದೆ ಎಂದಿದ್ದಾರೆ. ಇದರ ಜೊತೆ ಸ್ಥಳೀಯ ವ್ಯಾಪಾರ ಮತ್ತು ಉದ್ಯೋಗಕ್ಕೂ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಜೂನ್‌ನಲ್ಲಿ ಟ್ರಂಪ್ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಫ್ರೆನ್ಸ್ (ಜಿಎಸ್‌ಪಿ) ಕಾರ್ಯಕ್ರಮದಡಿ ಭಾರತದ ಅತ್ಯಾಪ್ತ ಸ್ಥಾನಮಾನ ತೆಗೆದುಹಾಕಿದ್ದರು. ಇದರಿಂದ ಉಭಯ ದೇಶಗಳ ನಡುವೆ ವ್ಯಾಪಾರ ಉದ್ವಿಗ್ನತೆ ಉಂಟಾಗಿತ್ತು. ಈ ಯೋಜನೆಯಡಿ 4, 800 ಸರಕುಗಳು ಯುಎಸ್ ಮಾರುಕಟ್ಟೆಗೆ ಸುಂಕ ರಹಿತವಾಗಿ ಪ್ರವೇಶಿಸುತ್ತಿದ್ದವು. ಇದನ್ನು ರದ್ದುಗೊಳಿಸಿದಾಗ ಭಾರತೀಯ ಸುಂಕದ ಲಾಭದ ಹೊರತಾಗಿ, ಭಾರತೀಯ ರಫ್ತುದಾರರು ಸ್ಪರ್ಧಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದರು. ಮೊನ್ನೆ ನಡೆದ ಉಭಯ ನಾಯಕರ ಸಭೆಯಿಂದ ಈ ಇದನ್ನು ಟ್ರಂಪ್ ಹಿಂತೆಗೆದುಕೊಳ್ಳುವ ಸಾಧ್ಯತೆ ಇದೆ.
ಫ್ರೆಂಚ್ ನಗರದ ಬಿಯರಿಟ್ಜ್ನಲ್ಲಿ ನಡೆದ ಜಿ 7 ಶೃಂಗಸಭೆಯ ಬಳಿಕ 40 ನಿಮಿಷಗಳ ಕಾಲ ಸಭೆ ನಡೆಸಿದ್ದ ಮೋದಿ ಮತ್ತು ಟ್ರಂಪ್ ಯುಎಸ್ನಿಂದ ತೈಲ ಸೇರಿದಂತೆ ಬೇರೆ ವಸ್ತುಗಳ ಆಮದನ್ನು ಹೆಚ್ಚಿಸುವ ಕುರಿತು ಮಾತನಾಡಿದ್ದಾರೆ. ಈಗಾಗಲೇ 4 ಬಿಲಿಯನ್ ನಷ್ಟು ತೈಲವನ್ನು ಪೈಪ್ಲೈನ್ ಮೂಲಕ ಆಮದು ಮಾಡಿಕೊಳ್ಳಲಾಗುತ್ತಿದೆ. ಇನ್ನು ಹೆಚ್ಚು ಆಮದು ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿದೆ. ಅಲ್ಲದೇ ಇದೇ ವೇಳೆ, ಅಮೆರಿಕ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಭಾರತ ಮತ್ತು ಅಮೆರಿಕ ನಡುವೆ 4.50 ಲಕ್ಷ ಕೋಟಿ ರೂ. ವ್ಯಾಪಾರದ ಸಂಬಂಧ ಒಡಂಬಡಿಕೆ ರೂಪುಗೊಳ್ಳಲಿದೆ. ಎರಡೂ ದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ. ವೈದ್ಯಕೀಯ ಮತ್ತು ಡೈರಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಕ್ರಮಗಳನ್ನ ತೆಗೆದುಕೊಳ್ಳಲಾಗುವುದೆಂದು ಮೋದಿ ಹೇಳಿದ್ದಾರೆ. ಅತೀ ದೊಡ್ಡ ಮತ್ತು ಹೆಚ್ಚಾಗಿ ಅಸಂಘಟಿತ ಭಾರತೀಯ ಡೈರಿ ವಲಯವನ್ನು ರಕ್ಷಿಸುವ ರಾಜಕೀಯ ಮತ್ತು ಆರ್ಥಿಕ ಅನಿವಾರ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಡೈರಿ ಕೈಗಾರಿಕೆಗಳ ಬೇಡಿಕೆಗಳು ಈಡೇರಿಸಲು ಮುಂದಾಗಿದ್ದಾರೆ.
ವಿವಿಧ ಡಿಜಿಟಲ್ ಪಾವತಿ ಸೇವೆಗಳ ಭಾರತೀಯ ಬಳಕೆದಾರರಿಗೆ ಸೇರಿದ ಎಲ್ಲಾ ಸೂಕ್ಷ್ಮ ದತ್ತಾಂಶಗಳ ಸ್ಥಳೀಕರಣಕ್ಕಾಗಿ ರಿಸರ್ವ್ ಬ್ಯಾಂಕ್ ಹೊಸ ಕಾಯ್ದೆಯನ್ನು ಹೊರಡಿಸಿದೆ, ಕಾರ್ಡ್ ಪಾವತಿ ಸೇವೆಗಳಾದ ವೀಸಾ ಮತ್ತು ಮಾಸ್ಟರ್‌ಕಾರ್ಡ್ ಮತ್ತು ಪೇಟಿಎಂ, ವಾಟ್ಸ್ಆ್ಯಪ್ಮತ್ತು ಗೂಗಲ್‌ನಂತಹ ಕಂಪನಿಗಳು ಇದನ್ನು ಪಾಲಿಸುತ್ತವೆ. ಗೂಗಲ್, ಮಾಸ್ಟರ್‌ಕಾರ್ಡ್, ವೀಸಾ ಮತ್ತು ಅಮೆಜಾನ್‌ನಂತಹ ಅನೇಕ ಯುಎಸ್ ಕಂಪನಿಗಳು ತಮ್ಮ ಕಾರ್ಯಾಚರಣೆಗಳ ಮೇಲೆ ಹೊಸ ನಿಯಮಗಳ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಆದ್ರೆ ಭಾರತೀಯ ಬಳಕೆದಾರರ ಡೇಟಾವನ್ನು ದೇಶದ ಹೊರಗೆ ಸಂಗ್ರಹಿಸಲು ಅನುಮತಿ ಇಲ್ಲ. ಎರಡನೇಯದಾಗಿ ದತ್ತಾಂಶ ಸ್ಥಳೀಕರಣವೂ ಭಾರತದ ಪ್ರಾರಂಭಿಕ ವಲಯಕ್ಕೂ ಒಂದು ಉತ್ತೇಜನವನ್ನು ನೀಡುತ್ತದೆ. ಈ ಡೇಟಾ ಸ್ಥಳೀಕರಣ ನಿಯಮಗಳನ್ನು ಪಾಲಿಸಲು ಸರ್ವರ್‌ಗಳಿಗೆ, ಯುಪಿಎಸ್, ಜನರೇಟರ್‌ಗಳಿಗೆ ಸಾಧ್ಯವಿಲ್ಲ. ಭಾರತವು ವಾರ್ಷಿಕವಾಗಿ 4 ಬಿಲಿಯನ್ ಅಮೆರಿಕನ್ ಇಂಧನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತದೆ. ಈ ಪ್ರದೇಶದಲ್ಲಿ ಯುಎಸ್ ಜೊತೆ ನಿಕಟ ಸಂಬಂಧವನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕುರಿತು ಕಳೆದ ತಿಂಗಳು ಫ್ರೆಂಚ್ ನಗರ ಬಿಯರಿಟ್ಜ್ನಲ್ಲಿ ನಡೆದ ಜಿ 7 ಶೃಂಗಸಭೆಯಲ್ಲಿ ಮೋದಿ ಮತ್ತು ಟ್ರಂಪ್ ಚರ್ಚಿಸಿದ್ದಾರೆ.
-