ಕರ್ನಾಟಕ

karnataka

ETV Bharat / bharat

ಜೈಪುರದಲ್ಲಿ ನಿರ್ಮಾಣ ಹಂತದ ಮನೆ ಕುಸಿತ; 15-20 ಮಂದಿಗೆ ಗಾಯ! - ನಿರ್ಮಾಣ ಹಂತದ ಮನೆ ಕುಸಿತ

ರಾಜಸ್ಥಾನದ ಜೈಪುರದಲ್ಲಿ ನಿರ್ಮಾಣದ ಹಂತ ಕಟ್ಟಡ ಕುಸಿದು ಹಲವರು ಗಾಯಗೊಂಡಿದ್ದಾರೆ. ಕಟ್ಟಡದ ಅವಶೇಷಗಳಡಿ 15 ರಿಂದ 20 ಮಂದಿ ಸಿಲುಕಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಬಂದಿರುವ ರಕ್ಷಣಾ ಪಡೆ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿಸಿದೆ.

house-under-construction-in-jaipur-collapsed-15-to-20-people-feared-buried
ಜೈಪುರದಲ್ಲಿ ನಿರ್ಮಾಣ ಹಂತದ ಮನೆ ಕುಸಿತ; 15-20 ಮಂದಿಗೆ ಗಾಯ!

By

Published : Sep 9, 2020, 4:00 PM IST

ಜೈಪುರ (ರಾಜಸ್ಥಾನ):ನಿರ್ಮಾಣ ಹಂತದಲ್ಲಿದ್ದ ಮನೆ ಕುಸಿದ ಹಲವರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಮನೆಯ ಅವಶೇಷಗಳಡಿ 15 ರಿಂದ 20 ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗಾಯಾಗಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಮತ್ತು ರಕ್ಷಣಾ ಪಡೆ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ. 10 ಮಂದಿ ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಮೂಲಗಳ ಪ್ರಕಾರ, ಮುಹಾನಾ ಪ್ರದೇಶದ ಕೃಷ್ಣ ವಿಹಾರ್ ಎಂಬಲ್ಲಿ ಕಟ್ಟಡವನ್ನು 3 ಅಂತಸ್ತಿಗೆ ಹೆಚ್ಚಿಸಲಾಗಿದೆ. ಕಳಪೆ ಕಾಮಗಾರಿಯಿಂದ ಕಟ್ಟಡ ಕುಸಿದೆ ಎನ್ನಲಾಗಿದೆ.

ABOUT THE AUTHOR

...view details