ವಾಷಿಂಗ್ಟಂನ್:ಅಧಿಕಾರ ದುರ್ಬಳಕೆ ಹಾಗೂ ಕಾಂಗ್ರೆಸ್ನ ಕೆಲಸ ಕಾರ್ಯಗಳಿಗೆ ಅಡ್ಡಿ ಮಾಡಿರುವ ಆರೋಪದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಮಹಾಭಿಯೋಗದ ಎರಡನೇ ಹಂತಕ್ಕೆ ಅಲ್ಲಿನ ಸಂಸತ್ತು ಸಜ್ಜಾಗಿದೆ. ಮಹಾಭಿಯೋಗದ ಆರ್ಟಿಕಲ್ಗಳನ್ನು ಸೆನೆಟ್ಗೆ ಕಳುಹಿಸಲಾಗಿದೆ. ಸೆನೆಟ್ನಲ್ಲಿ ಡೊನಾಲ್ಡ್ ಟ್ರಂಪ್ನ ಪಕ್ಷವಾದ ರಿಪಬ್ಲಿಕ್ನ ಸದಸ್ಯರೇ ಹೆಚ್ಚಾಗಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸದಸ್ಯರು ಹೆಚ್ಚಾಗಿದ್ದ ಹೌಸ್ ಆಫ್ ರೆಪ್ರೆಸೆಂಟೇಟೀವ್ಸ್ನಲ್ಲಿ ಅಂದ್ರೆ ಮೇಲ್ಮನೆಯಲ್ಲಿ ಡೊನಾಲ್ಡ್ ಟ್ರಂಪ್ಗೆ ಹಿನ್ನಡೆಯಾಗಿತ್ತು. ಈಗ ಸೆನೆಟ್ನಲ್ಲಿ ಮತದಾನ ನಡೆಯಲಿದೆ.
ಮೇಲ್ಮನೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಪಾಸಾದ ಆರ್ಟಿಕಲ್ ಗಳನ್ನು ಅಲ್ಲಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ಸಹಿ ಮಾಡಿ ಸೆನೆಟ್ಗೆ ಕಳಿಸಿದ್ದಾರೆ. ಈ ಕುರಿತು ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ಆ್ಯಡಂ ಸ್ಕಿಫ್, ಜೆರ್ರಿ ನಾಡ್ಲರ್, ಹಕೀಂ ಜೆಫ್ರೀಸ್, ಝೋಯ್ ಲೋಫ್ಗ್ರೆನ್, ವಾಲ್ ಡೆಮ್ಮಿಂಗ್ಸ್, ಜಾಸನ್ ಕ್ರೋ, ಸಿಲ್ವಿಯಾ ಗಾರ್ಸಿಯಾ, ನೇತೃತ್ವದ ಏಳು ಮಂದಿಯ ಮಹಾಭಿಯೋಗ ವ್ಯವಸ್ಥಾಪಕ ತಂಡವನ್ನು ನ್ಯಾನ್ಸಿ ಪೆಲೋಸಿ ರಚಿಸಿದ್ದಾರೆ.
ಕೆಂಟುಕಿಯ ರಿಪಬ್ಲಿಕನ್ ಸದಸ್ಯ ಹಾಗೂ ಸೆನೆಟ್ನ ನಾಯಕ ಮಿಚ್ ಮ್ಯಾಕ್ ಮೆಕ್ ವ್ಯವಸ್ಥಾಪಕರ ತಂಡವನ್ನು ಆಹ್ವಾನಿಸಿದ್ದು, ಸೆನೆಟ್ಗೆ ಆಹ್ವಾನಿಸಿದ್ದಾರೆ. ಮತ್ತು ಮೇಲ್ಮನೆಯಿಂದ ಬಂದ ಮಹಾಭಿಯೋಗದ ವರದಿಯನ್ನು ಓದಿ ಮತಯಾಚನೆಗೆ ಅವಕಾಶ ಮಾಡಿಕೊಡಲಿದ್ದಾರೆ. ಈ ವೇಳೆ ಅಲ್ಲಿನ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಸೆನೆಟ್ನ ಅಧ್ಯಕ್ಷರಾಗಿ ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮಹಾಭಿಯೋಗದ ಮತದಾನದ ಪ್ರಕ್ರಿಯೆ ಮುಗಿಯುವವರೆಗೂ ಅಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.