ನವದೆಹಲಿ: ಉತ್ತರ ಪ್ರದೇಶದ 8 ಪೊಲೀಸರ ಎನ್ಕೌಂಟರ್ಗೆ ಕಾರಣನಾದ ಕುಖ್ಯಾತ ರೌಡಿ ವಿಕಾಸ್ ದುಬೆ ಇಂದು ಪೊಲೀಸ್ ಎನ್ಕೌಂಟರ್ಗೆ ಬಲಿಯಾಗಿದ್ದಾನೆ. ಇದಕ್ಕೂ ಮುಂಚೆ ವಿಕಾಸ್ ದುಬೆಗೆ ಭದ್ರತೆ ಒದಗಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ಕೋರಿ ಕಳೆದ ರಾತ್ರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಎನ್ಕೌಂಟರ್ಗೆ ಕೆಲವೇ ಗಂಟೆಗಳ ಮುಂಚೆ ದುಬೆಗೆ ಭದ್ರತೆ ಒದಗಿಸುವಂತೆ ಸುಪ್ರೀಂಗೆ ಸಲ್ಲಿಕೆಯಾಗಿತ್ತು ಅರ್ಜಿ! - ದುಬೆ ಎನ್ಕೌಂಟರ್ ಸುದ್ದಿ
ಮಹಾರಾಷ್ಟ್ರ ಮೂಲದ ವಕೀಲ ಘನಶ್ಯಾಮ್ ಉಪಾಧ್ಯಾಯ ಎಂಬುವರು, ತಡರಾತ್ರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ದುಬೆಗೆ ಸೂಕ್ತ ಭದ್ರತೆ ನೀಡದಿದ್ದರೆ, ಪೊಲೀಸರನ್ನು ಹತ್ಯೆ ಮಾಡಿದ್ದ ದುಬೆ ಸಹಚರರು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದೇ ರೀತಿ ದುಬೆಯನ್ನು ಕೂಡಾ ಪೊಲೀಸರು ಎನ್ಕೌಂಟರ್ ಮಾಡುವ ಸಾಧ್ಯತೆಯಿದೆ ಎಂದು ವಕೀಲರು ಆತಂಕ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ.

ಇದರೊಂದಿಗೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಇತರ ಐವರು ಆರೋಪಿಗಳನ್ನು ಹತ್ಯೆಗೈದ ಬಗ್ಗೆ ಸಿಬಿಐ ತನಿಖೆಗೆ ಅವರು ಕೋರಿದ್ದರು. ಅಲ್ಲದೆ ವಸತಿ ಕಟ್ಟಡ, ಶಾಪಿಂಗ್ ಮಾಲ್, ದುಬಾರಿ ವಾಹನಗಳು ಸೇರಿದಂತೆ ವಿಕಾಸ್ ದುಬೆಯ ಆಸ್ತಿ-ಪಾಸ್ತಿಗಳ ನಾಶದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ಗೆ ಕೋರಲಾಗಿದೆ.