ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿನ ಸಿನಿಮಾ ಥಿಯೇಟರ್, ಬೇಕರಿ, ಹೋಟೆಲ್ ಹಾಗೂ ಬೀದಿಬದಿ ವ್ಯಾಪಾರವನ್ನು ಒಂದು ವಾರ ಕಾಲ ಬಂದ್ ಮಾಡಲು ಸ್ಥಳೀಯ ಮಹಾನಗರ ಪಾಲಿಕೆ ನಿರ್ಧರಿಸಿದೆ. ಕೊರೊನಾ ಮಹಾಮಾರಿ ಮತ್ತಷ್ಟು ಹರಡುವುದನ್ನು ತಡೆಗಟ್ಟುವ ಸಲುವಾಗಿ ಈ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೊನಾ ಭೀತಿ: ಕಲಬುರಗಿಯಲ್ಲಿ ಸಿನಿಮಾ ಥಿಯೇಟರ್, ಹೋಟೆಲ್ ಒಂದು ವಾರ ಬಂದ್ - ಹೊಟೇಲ್, ಥಿಯೇಟರ್ಗಳು ಬಂದ್
ಕೊರೊನಾ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದೇಶದಲ್ಲೇ ಮೊದಲ ಸಾವು ಸಂಭವಿಸಿದ ಕಲಬುರಗಿಯಲ್ಲಿ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಲಬುರಗಿಯಲ್ಲಿ ಸಿನಿಮಾ ಥಿಯೇಟರ್, ಹೊಟೇಲ್ ಒಂದು ವಾರ ಬಂದ್
ದೇಶದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೊದಲ ಸಾವು ಕಲಬುರಗಿಯಲ್ಲೇ ಸಂಭವಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ದುಬೈನಿಂದ ಮರಳಿದ್ದ ಕಲಬುರಗಿಯ 76 ವರ್ಷದ ವೃದ್ಧರೊಬ್ಬರು ವೈರಸ್ನಿಂದಾಗಿ ತೀರಿಕೊಂಡಿದ್ದರು.
Last Updated : Mar 17, 2020, 4:06 PM IST