ಚೆನ್ನೈ: ದಕ್ಷಿಣ ಭಾರತದ ಪ್ರಮುಖ ರಾಜ್ಯ ತಮಿಳುನಾಡಿನಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಶಾಲಾ-ಕಾಲೇಜು ಮಾತ್ರವಲ್ಲದೇ ಐಟಿ ಕಂಪನಿಗಳು ಅನಿರ್ಧಿಷ್ಟಾವಧಿಗೆ ಬೀಗ ಹಾಕಿವೆ.
ಮಳೆಯ ಅಭಾವದಿಂದ ನೀರಿನ ಸಮಸ್ಯೆ ತೀವ್ರವಾಗಿ ತಲೆದೋರಿದ್ದು ಚೆನ್ನೈ ಮಹಾನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ. ಖಾಸಗಿ ನೀರಿನ ಟ್ಯಾಂಕರ್ಗಳು ದರವನ್ನು ದುಪ್ಪಟ್ಟು ಮಾಡಿದ್ದು ನಿವಾಸಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಚೆನ್ನೈ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಂಪನಿಗಳು ನೀರಿನ ಕೊರತೆಯಿಂದ ಶಟರ್ ಎಳೆದಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದೆ. ಇತ್ತ ಹೋಟೆಲ್ಗಳು ವ್ಯವಹಾರದ ಸಮಯವನ್ನು ಕಡಿತಗೊಳಿಸಿವೆ.