ಔರಂಗಾಬಾದ್, (ಮಹಾರಾಷ್ಟ್ರ):ಹಸಿವಾದವನಿಗೆ ಅನ್ನದ ಬೆಲೆ ಗೊತ್ತಾಗುತ್ತೆ ಅಂತಾರೆ ಅದು ನಿಜ. ಈಗಲೂ ಎಷ್ಟೋ ಮಕ್ಕಳು ನಿತ್ಯ ಹಸಿವಿನಿಂದ ಬಳಲ್ತಿವೆ. ಅದಕ್ಕಾಗಿಯೇ ಔರಂಗಾಬಾದ್‌ನಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳು ಅನ್ನ ಉಳಿದ ಮೇಲೆ ಕೆಡಿಸದೇ ಬಡ, ಹಸಿದ ಮಕ್ಕಳ ಹೊಟ್ಟೆ ತುಂಬಿಸ್ತಿವೆ.
ಸಾಂದರ್ಭಿಕ ಚಿತ್ರ (ಕೃಪೆ ಫೇಸ್ಬುಕ್) ಔರಂಗಾಬಾದ್‌ನ ಹೋಟೆಲ್, ರೆಸ್ಟೋರೆಂಟ್‌ಗಳು ಈಗ ತಿನ್ನುವ ಆಹಾರ ಉಳಿದ್ರೇ ವೇಸ್ಟ್ ಮಾಡಲ್ಲ. ಯಾವ ಮಕ್ಕಳು ಹಸಿವಿನಿಂದ ಇರ್ತಾವೋ ಆ ಮಕ್ಕಳಿಗೆ ಅದೇ ಆಹಾರವನ್ನ ಹಂಚುತ್ತಿವೆ. ಹೋಟೆಲ್‌ಗಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಖಾದ್ಯಗಳನ್ನ ಮಾಡ್ಲಾಗಿರುತ್ತೆ. ನಿರೀಕ್ಷೆಯಷ್ಟು ಗ್ರಾಹಕರು ತಿನ್ನದೇ ಅಥವಾ ತಿಂದ ಮೇಲೂ ಉಳಿದ್ರೇ ಆ ಆಹಾರವನ್ನ ಕೆಡಿಸೋದಿಲ್ಲ. ಹೀಗೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಉಳಿದ ಆಹಾರವನ್ನ ನಿಜವಾಗಿಯೂ ಹಸಿದ ಮಕ್ಕಳಿಗೆ ನಿತ್ಯ ಪೂರೈಸಲಾಗುತ್ತಿದೆ.
ನಿವೃತ್ತ ಅಧಿಕಾರಿ ಅನಂತ್ ಮೊತಾಲೆ ಎಂಬುವರು 2014ರಲ್ಲಿ ಸೇವ್ ಫುಡ್ ಕಮೀಟಿಯೊಂದನ್ನ ರೂಪಿಸಿದ್ದಾರೆ. ಇದರಲ್ಲಿ ಔರಂಗಾಬಾದ್‌ನ ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಎನ್‌ಜಿಒಗಳು ಮತ್ತು 25ಕ್ಕೂ ಹೆಚ್ಚು ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಸದಸ್ಯರಾಗಿದ್ದಾರೆ. ಇವರೆಲ್ಲ ಸಭೆ ಸೇರಿ ಯಾವುದೇ ಕಾರಣಕ್ಕೂ ಆಹಾರ ಕೆಡಿಸಿದಂತೆ ನಿರ್ಣಯಿಸಿದ್ದರು. ಆಗಾಗಾ ಆಹಾರ ಕೆಡಿಸದಂತೆ ಅಭಿಯಾನ ಕೂಡ ಕೈಗೊಳ್ತಾ ಬಂದಿದ್ದಾರೆ. ಈಗ ಅಪ್ಪಿತಪ್ಪಿ ಹೋಟೆಲ್‌ಗಳಲ್ಲಿ ಆಹಾರ ಉಳಿದ್ರೆ ಎನ್‌ಜಿಒಗಳ ಕಾರ್ಯಕರ್ತರ ಮೂಲಕವಾಗಿ ನಗರದಲ್ಲಿರುವ ಬಡ ಮಕ್ಕಳಿಗೆ ಪೂರೈಸಲಾಗುತ್ತಿದೆ.
ಸಾಂದರ್ಭಿಕ ಚಿತ್ರ (ಕೃಪೆ ಟ್ವಿಟರ್) ಜಾಗತಿಕ ಹಸಿವು ಸೂಚ್ಯಂಕದ ವರದಿ ಅನುಸಾರ ಭಾರತದಲ್ಲಿ ನಿತ್ಯ 200 ಕೋಟಿ ಜನರಿಗಾಗಿ ಆಹಾರ ತಯಾರಿಸಲಾಗುತ್ತದಯಂತೆ. ಆದರೆ, ಇದರಲ್ಲಿ 100 ಕೋಟಿಯಷ್ಟು ಜನ ತಿನ್ನುವ ಆಹಾರ ವೇಸ್ಟಾಗ್ತಿದೆ. ಮತ್ತೊಂದೆಡೆ ನಿತ್ಯ 27 ಕೋಟಿಗೂ ಅಧಿಕ ಜನ ಹಸಿವಿನಿಂದ ಬಳಲುವ ಜನ ಇದ್ದಾರೆ ಅಂತಾರೆ ಅನಂತ್ ಮೊತಾಲೆ.