ಕರ್ನಾಟಕ

karnataka

ETV Bharat / bharat

ಕೋವಿಡ್​ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೇಲೆ ಗಾರ್ಡ್​ನಿಂದ ಅತ್ಯಾಚಾರ - ಅಪ್ರಾಪ್ತೆ ಮೇಲೆ ಗಾರ್ಡ್​ನಿಂದ ಅತ್ಯಾಚಾರ

ಕೋವಿಡ್​ ಆಸ್ಪತ್ರೆಯಲ್ಲಿ ಗಾರ್ಡ್​​ವೊಬ್ಬ ಅಪ್ರಾಪ್ತೆ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Hospital guard in Bihar held for allegedly raping minor
ಕೋವಿಡ್​ ಆಸ್ಪತ್ರೆಯಲ್ಲಿ ಅಪ್ರಾಪ್ತೆ ಮೇಲೆ ಗಾರ್ಡ್​ನಿಂದ ಅತ್ಯಾಚಾರ

By

Published : Jul 16, 2020, 6:04 AM IST

ಪಾಟ್ನಾ (ಬಿಹಾರ):ಕೋವಿಡ್​ ಆಸ್ಪತ್ರೆ (ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ) ಯಲ್ಲಿ ಅಪ್ರಾಪ್ತೆ ಮೇಲೆ ಗಾರ್ಡ್​​ವೊಬ್ಬ ಅತ್ಯಾಚಾರ ಎಸಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ಕಳೆದ 3 ತಿಂಗಳಿನಿಂದ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹೇಶ್ ಪ್ರಸಾದ್ ಎಂಬಾತನನ್ನು ಬಂಧಿಸಲಾಗಿದೆ. ಜುಲೈ 8ರಂದು ಸಂತ್ರಸ್ತೆ ಚಿಕಿತ್ಸೆಗಾಗಿ ಆಸ್ಪತ್ರೆ ಗೆ ಬಂದಿದ್ದಾಗ ರಾತ್ರಿ ವೇಳೆ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಹೇಳಿಕೆಯ ಆಧಾರದ ಮೇಲೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿದ್ದಾರೆ. ಬಾಲಕಿಯ ವೈದ್ಯಕೀಯ ವರದಿ ಎರಡು-ಮೂರು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಬಿಹಾರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ದಿಲ್ಮಾನಿ ಮಿಶ್ರಾ ತಿಳಿಸಿದ್ದಾರೆ.

ಆದರೆ, ಆರೋಪಿ ಮಹೇಶ್ ಪ್ರಸಾದ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದು, ನಾನು ಯಾವುದೇ ಕೃತ್ಯ ಎಸಗಿಲ್ಲ, ಪೊಲೀಸರು ನನ್ನ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಕರೆ ರೆಕಾರ್ಡಿಂಗ್ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು. ನಾನು ಯಾರ ಮೇಲೂ ಅತ್ಯಾಚಾರ ಮಾಡಿಲ್ಲ ಎಂದಿದ್ದಾನೆ.

ABOUT THE AUTHOR

...view details