ಶ್ರೀನಗರ:ಗೃಹ ಬಂಧನದಲ್ಲಿ ಇರುವ ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫರೂಕ್ ಅಬ್ದುಲ್ಲಾ ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನ ಕೇಂದ್ರ ಸರ್ಕಾರ ವಾಪಸ್ ಪಡೆದಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫರೂಕ್ ಅಬ್ದುಲ್ಲಾ /Farooq Abdullah ಕಾಶ್ಮೀರದ ಮುಖಂಡರನ್ನು ಗೃಹ ಬಂಧನದಲ್ಲಿ ಇರಿಸಿರುವುದನ್ನೂ ಖಂಡಿಸಿದ್ದಾರೆ. 370 ರದ್ದು ಬಗ್ಗೆ ಮಾತನಾಡಿರುವ ಅವರು, ಶೀಘ್ರದಲ್ಲೇ ನಾವು ಹೊರಗೆ ಬರುತ್ತವೆ. ಮುಚ್ಚಿರುವ ಗೇಟ್ಗಳು ಖುಲ್ಲಾ ಆಗಲಿವೆ. ನಮ್ಮ ಜನ ಮನೆಗಳಿಂದ ಹೊರ ಬರಲಿದ್ದಾರೆ. ಕೇಂದ್ರದ ನಿರ್ಧಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ಕೋರ್ಟ್ಗೆ ಹೋಗುತ್ತೇವೆ ಎಂದು ಫರೂಕ್ ಅಬ್ದುಲ್ಲಾ ಅಬ್ಬರಿಸಿದ್ದಾರೆ.
ನಾವ್ಯಾರೂ ಗನ್ಗಳನ್ನ ಇಟ್ಟುಕೊಂಡು ಓಡಾಡುತ್ತಿಲ್ಲ. ಗ್ರೆನೇಡ್ ಎಸೆಯುವವರೂ ಅಲ್ಲ, ಕಲ್ಲುಗಳನ್ನೂ ತೂರುವವರಲ್ಲ. ನಮಗೆ ಶಾಂತಿಯುತ ಹೋರಾಟದಲ್ಲಿ ನಂಬಿಕೆ ಇದೆ. ಆದರೆ ಅವರು ಜೈಲಿನಲ್ಲಿಟ್ಟು ನಮ್ಮ ಕೊಲೆ ಮಾಡಲು ಮುಂದಾಗಿದ್ದಾರೆ. ನನ್ನ ಪುತ್ರನನ್ನು ಜೈಲಿನಲ್ಲಿ ಇಡಲಾಗಿದೆ.
ಇದೇ ವೇಳೆ, ಗೃಹ ಸಚಿವ ಅಮಿತ್ ಶಾ ಸಂಸತ್ನಲ್ಲಿ ಸುಳ್ಳು ಹೇಳಿದ್ದಾರೆ. ನಾನು ಗೃಹ ಬಂಧನದಲ್ಲಿ ಇಲ್ಲ. ನಾನು ನನ್ನ ಮನೆಯಲ್ಲೇ ನನ್ನ ಇಚ್ಚೆಂತೆ ಇದ್ದೇನೆ ಎಂದೂ ಮಾಜಿ ಸಿಎಂ ಆರೋಪಿಸಿದ್ದಾರೆ.
ಅಬ್ದುಲ್ಲಾ ಆರೋಪಕ್ಕೆ ಶಾ ಪ್ರತ್ಯುತ್ತರ
ಹೌದು, ಫರೂಕ್ ಅಬ್ದುಲ್ಲಾ ಗೃಹ ಬಂಧನ ವಿಧಿಸಲಾಗಿದೆ ಎಂದು ಯಾರು ಹೇಳಿದ್ದಾರೆ. ನಾನು ಈ ಬಗ್ಗೆ ಸ್ಪಷ್ಟನೆ ನೀಡುತ್ತೇನೆ, ಅಬ್ದುಲ್ಲಾ ಅವರು ಅವರ ಮನೆಯಲ್ಲೇ ಇದ್ದಾರೆ. ಅವರನ್ನ ಗೃಹ ಬಂಧನದಲ್ಲಿ ಇಡಲಾಗಿಲ್ಲ. ಅವರ ಆರೋಗ್ಯವಾಗಿದ್ದಾರೆ ಎಂದು ಸದನದಲ್ಲಿ ಮಾಹಿತಿ ನೀಡಿದರು.ಇದು ನಾಲ್ಕನೇ ಸಲ ನಾನು ಹೇಳುತ್ತಿರುವುದು, ಇನ್ನು 10 ಸಲ ಹೇಳಲು ಸಿದ್ಧನಿರುವೆ. ಫರೂಖ್ ಅಬ್ದುಲ್ಲಾ ಅವರನ್ನ ನಾವು ಗೃಹಬಂಧನದಲ್ಲಿ ಅಥವಾ ಬಂಧನ ಮಾಡಿಲ್ಲ. ಅವರ ಆರೋಗ್ಯ ಚೆನ್ನಾಗಿಲ್ಲವಾದರೆ ಡಾಕ್ಟರ್ ಹತ್ತಿರ ತೋರಿಸಿಕೊಳ್ಳಲಿ. ಅವರಿಗೆ ನಾವು ಯಾವುದೇ ರೀತಿಯ ಗೃಹ ಬಂಧನದಲ್ಲಿ ಹಾಕಿಲ್ಲ ಎಂದು ಅವರು ತಿಳಿಸಿದ್ದಾರೆ.