ಕರ್ನಾಟಕ

karnataka

ETV Bharat / bharat

ಹಥ್ರಾಸ್​ ಪ್ರಕರಣದಲ್ಲಿ ಸಂತ್ರಸ್ಥೆಯ ತೇಜೋವಧೆ ಖಂಡನೀಯ: ಪ್ರಿಯಾಂಕ ವಾದ್ರಾ - ಉತ್ತರಪ್ರದೇಶ ಅಪರಾಧ ಸುದ್ದಿ

"ಹಥ್ರಾಸ್ ಸಂತ್ರಸ್ತೆ ನ್ಯಾಯಕ್ಕೆ ಅರ್ಹಳೇ ಹೊರತು ಅಪಪ್ರಚಾರಕ್ಕೆ ಅಲ್ಲ" ಎಂದು ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕ ವಾದ್ರಾ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಟ್ವೀಟಾಸ್ತ್ರ
ಪ್ರಿಯಾಂಕ ಟ್ವೀಟಾಸ್ತ್ರ

By

Published : Oct 8, 2020, 3:17 PM IST

ನವದೆಹಲಿ: ಹಥ್ರಾಸ್ ಸಂತ್ರಸ್ತೆಯನ್ನು ಕೆಣಕಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸುಳ್ಳು ನಿರೂಪಣೆ ಮಾಡುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ, ಆಕೆ ನ್ಯಾಯಕ್ಕೆ ಅರ್ಹಳೇ ಹೊರತು ಅಪಪ್ರಚಾರಕ್ಕೆ ಅಲ್ಲ ಎಂದು ಹೇಳಿದ್ದಾರೆ.

ಮಹಿಳೆಯ ವ್ಯಕ್ತಿತ್ವ ಕೆಣಕುವ ರೀತಿ ಹೇಳಿಕೆ ನೀಡುವುದು, ಅವಳ ವಿರುದ್ಧದ ಅಪರಾಧಗಳಲ್ಲಿ ಅವಳನ್ನು ಹೇಗಾದರೂ ಹೊಣೆಗಾರರನ್ನಾಗಿ ಮಾಡುವುದು ಖಂಡನೀಯ ಎಂದು ಟ್ವೀಟ್​ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಸಂತ್ರಸ್ತೆಯ ಮೃತದೇಹವನ್ನು ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಹಾಗೂ ಅವರಿಗೆ ಮುಖವನ್ನೂ ತೋರಿಸದೆ ಅಂತ್ಯಕ್ರಿಯೆ ಮಾಡಿದ್ದಾರೆ ಎಂದು ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸೆಪ್ಟಂಬರ್ 29ರಂದು ನಿಧನರಾದ ಹಥ್ರಾಸ್ ಸಂತ್ರಸ್ತೆಯ ವಿರುದ್ಧ ಬಿಜೆಪಿ ಪ್ರಚಾರ ನಡೆಸುತ್ತಿದೆ ಎಂದು ಪ್ರಿಯಾಂಕಾ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಈ ವಿಷಯದಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡುತ್ತೀರಾ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದರು.

ಸದ್ಯ ಘಟನೆಯ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ವಹಿಸಿದೆ.

ABOUT THE AUTHOR

...view details