ಕರ್ನಾಟಕ

karnataka

ETV Bharat / bharat

ಏರ್ಪೋರ್ಟ್‌ನಲ್ಲಿ ಸೋಂಕು ನಿವಾರಿಸುವ ಅತ್ಯಾಧುನಿಕ ಯಂತ್ರ ಅವಳವಡಿಕೆ: ಇದು ವಿಶ್ವದಲ್ಲೇ ಮೊದಲು - ಕೋವಿಡ್‌-19 ಮಹಾಮಾರಿ

ಕೊರೊನಾ ವೈರಸ್‌ ಹರಡುವಿಕೆಯನ್ನು ತಡೆಯುವ ಸಲುವಾಗಿ ಹಾಂಕಾಂಗ್‌ ವಿಮಾನ ನಿಲ್ದಾಣದಲ್ಲಿ ಸೋಂಕು ನಿವಾರಕ ಯಂತ್ರವನ್ನು ಅವಳಡಿಸಲಾಗಿದೆ. ಜೊತೆಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಕ್ಲೀನಿಂಗ್‌ ರೊಂಬೊಗಳನ್ನು ನಿಯೋಜಿಸಲಾಗಿದೆ.

Hong Kong airport
ಹಾಂಕಾಂಗ್‌ ವಿಮಾನ ನಿಲ್ದಾಣ

By

Published : Apr 26, 2020, 8:55 PM IST

ಹಾಂಕಾಂಗ್‌: ವಿಶ್ವಾದ್ಯಂತ ಕೋವಿಡ್‌-19 ಮಹಾಮಾರಿ ಆವರಿಸಿರುವುದರಿಂದ ಇದೀಗ ಎಲ್ಲ ದೇಶಗಳು ಹೈ ಅಲರ್ಟ್‌ ಆಗಿವೆ. ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ಹಾಂಕಾಂಗ್‌ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ಸ್ಪರ್ಶ ನೀಡಲಾಗಿದೆ.

ಟೆಲಿಫೋನ್‌ ಬೂತ್‌ ಮಾದರಿಯಲ್ಲಿರುವ ಈ ಆಧುನಿಕ ಯಂತ್ರದೊಳಕ್ಕೆ ಮನುಷ್ಯ ಪ್ರವೇಶಿದರೆ ಕೇವಲ 40 ಸೆಕೆಂಡ್‌ಗಳಲ್ಲಿ ಆತನ ದೇಹದಲ್ಲಿನ ಸೋಂಕನ್ನು ನಿವಾರಿಸಿ, ಸ್ಯಾನಿಟೈಸರ್‌ ಅಂತಹ ಎಲ್ಲ ಪ್ರಕ್ರಿಯೆಗಳನ್ನು ಮುಗಿಸುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ವಿಮಾನ ನಿಲ್ದಾಣದ ಪ್ರಾಧಿಕಾರ (ಎಎ), ಮನುಷ್ಯನ ದೇಹದಲ್ಲಿ ವೈರಸ್‌ ಅಥವಾ ಬ್ಯಾಕ್ಟೀರಿಯಾಗಳು ಇದ್ದರೆ, ಈ ಯಂತ್ರ ಕೂಡಲೇ ಕೊಲ್ಲುತ್ತದೆ. ದ್ಯುತಿ ಸಂಶ್ಲೇಷಕ ಮತ್ತು ನ್ಯಾನೊನೀಡಲ್ಸ್‌ ತಂತ್ರಜ್ಞಾನದಿಂದ ಇದನ್ನು ನಿರ್ಮಿಸಲಾಗಿದೆ ಎಂದು ಹೇಳಿದೆ. ಇಂತಹ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ವಿಶ್ವದ ಮೊದಲ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಹಾಂಕಾಂಗ್‌ ವಿಮಾನ ನಿಲ್ದಾಣ ಪಾತ್ರವಾಗಿದೆ.

ಸದ್ಯಕ್ಕೆ ಈ ಯಂತ್ರವನ್ನು ವಿಮಾನ ನಿಲ್ದಾಣದ ಸಿಬ್ಬಂದಿಯ ತಪಾಸಣೆಗಾಗಿ ಬಳಕೆ ಮಾಡಲಾಗುತ್ತಿದೆ. ಇನ್ನು, ಕ್ಲೀನಿಂಗ್‌ ರೋಬೊವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ವಿಮಾನ ನಿಲ್ದಾಣದ ಪ್ರಯಾಣಿಕರ ಸೇವೆಗೆ ಉಪಯೋಗಿಸಲಾಗುತ್ತದೆ. ಶೇಕಡಾ 99.99ರಷ್ಟು ಬ್ಯಾಕ್ಟೀರಿಯಾಗಳನ್ನು ಈ ರೋಬೊ ನಾಶ ಮಾಡಲಿದೆ ಎಂದಿದೆ.

ABOUT THE AUTHOR

...view details