ಕರ್ನಾಟಕ

karnataka

ETV Bharat / bharat

ಗಡಿಯಲ್ಲಿ ಗುಂಡಿನ ಚಕಮಕಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬಲಿ - Top Hizbul Mujahideen militant Azaad Lalhari

ಜಂಟಿ ಕಾರ್ಯಾಚರಣೆ ತಂಡ ಉಗ್ರರ ಅಡಗುತಾಣವನ್ನು ಸುತ್ತುವರಿಯುತ್ತಿದ್ದ ಹಾಗೆ, ಉಗ್ರರು ಭಾರಿ ಗುಂಡಿನ ದಾಳಿ ನಡೆಸಿದರು. ಈ ವೇಳೆ ಸೈನಿಕನೋರ್ವ ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಓರ್ವ ಉಗ್ರ ಬಲಿಯಾಗಿದ್ದಾನೆ. ಎಕೆ 47 ಜೊತೆಗೆ ಗ್ರೆನೇಡ್, ಸ್ಫೋಟಕವಿದ್ದ ಚೀಲಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್
ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್

By

Published : Aug 12, 2020, 8:27 PM IST

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್ ಹತನಾಗಿದ್ದಾನೆ ಎಂದು ಸೇನೆ ತಿಳಿಸಿದೆ.

ಪುಲ್ವಾಮಾದ ಕಮ್ರಾಜಿಪೊರಾದಲ್ಲಿ ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಜಮ್ಮು ಕಾಶ್ಮೀರ ಪೊಲೀಸ್ ಸಿಆರ್‌ಪಿಎಫ್‍, ವಿಶೇಷ ಕಾರ್ಯಾಚರಣಾ ತಂಡ, ರಾಷ್ಟ್ರೀಯ ರೈಫಲ್ಸ್ ಪಡೆಗಳು ಆಗಸ್ಟ್ 11 ಮತ್ತು 12 ರ ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್ ಹತ

ಜಂಟಿ ಕಾರ್ಯಾಚರಣೆ ತಂಡ ಉಗ್ರ ಅಡಗುತಾಣವನ್ನು ಸುತ್ತುವರಿಯುತ್ತಿದ್ದ ಹಾಗೆ, ಉಗ್ರರು ಭಾರಿ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಸೈನಿಕನೋರ್ವ ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಓರ್ವ ಉಗ್ರ ಹತನಾಗಿದ್ದಾನೆ. ಎಕೆ 47 ಜೊತೆಗೆ ಗ್ರೆನೇಡ್, ಸ್ಫೋಟಕ ತುಂಬಿದ್ದ ಚೀಲಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ.

ಹತ್ಯೆಗೀಡಾದ ಉಗ್ರನನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಕಮಾಂಡರ್ ಆಜಾದ್ ಅಹ್ಮದ್ ಲೋನ್ ಅಕಾ ಅಜಾದ್ ಲಲ್ಹಾರಿ ಎಂದು ಗುರುತಿಸಲಾಗಿದೆ. ಲೋನ್ ಪುಲ್ವಾಮಾದ ಲೆಲ್ಹಾರ್ ಗ್ರಾಮದ ನಿವಾಸಿ.

ಮೇ 22, 2020 ರಂದು ಪುಲ್ವಾಮಾದ ಪ್ರಿಚು ಪ್ರದೇಶದಲ್ಲಿ ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಅನೂಪ್ ಸಿಂಗ್ ಹತ್ಯೆಯಲ್ಲಿ ಆಜಾದ್ ಲಲ್ಹಾರಿ ಭಾಗಿಯಾಗಿದ್ದ. ಉಗ್ರ ಸಂಬಂಧಿತ ಕೊಲೆಗಳಿಗಾಗಿ ಆತನ ವಿರುದ್ಧ ಆರು ಎಫ್ಐಆರ್​ಗಳಿವೆ ಎಂದು ಜೆ & ಕೆ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ABOUT THE AUTHOR

...view details