ಜಬಲ್ಪುರ್ (ಮಧ್ಯಪ್ರದೇಶ):ಕೊರೊನಾ ಸಾಂಕ್ರಾಮಿಕದ ನಡುವೆಯೂ ಸುಮಾರು 34 ಹೆಚ್‌ಐವಿ ಪೀಡಿತೆಯರು ಆರೋಗ್ಯವಂತ ಶಿಶುಗಳಿಗೆ ಜಬಲ್ಪುರದ ಲೇಡಿ ಎಲ್ಜಿನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ನವಜಾತ ಶಿಶುಗಳ ಹೆಚ್ಐವಿ ಪರೀಕ್ಷೆಯ ರಿಪೋರ್ಟ್ ನೆಗೆಟಿವ್ ಇದೆ ಎಂದು ವರದಿಯಾಗಿದೆ.
ಕಳೆದ 46 ತಿಂಗಳಲ್ಲಿ ಲೇಡಿ ಎಲ್ಜಿನ್ ಆಸ್ಪತ್ರೆಯಲ್ಲಿ ಸುಮಾರು 135 ಮಹಿಳೆಯರಿಗೆ ಹೆಚ್‌ಐವಿ ಇರುವುದು ಪತ್ತೆಯಾಗಿತ್ತು. ಈ ಪೈಕಿ 34 ಗರ್ಭಿಣಿಯರಿದ್ದರು. ಶಿಶುಗಳನ್ನು ಸೋಂಕಿನಿಂದ ರಕ್ಷಿಸುವುದು ವೈದ್ಯರ ಮುಂದಿದ್ದ ಸವಾಲಾಗಿತ್ತು.
ಆಸ್ಪತ್ರೆಯ ವೈದ್ಯರಾದ ಸಂಜಯ್ ಮಿಶ್ರಾ ಅವರು, ಹುಟ್ಟಲಿರುವ ಮಗುವಿಗೆ ಹೆಚ್‌ಐವಿ ಸೋಂಕಿನ ಅಪಾಯವಿಲ್ಲ. ಆದರೆ, ತಾಯಿಯ ದೇಹದಿಂದ ಹೊರಬರುವ ರಕ್ತಕ್ಕೆ ಒಡ್ಡಿಕೊಳ್ಳುವುದರಿಂದ ಹೆರಿಗೆಯ ಸಮಯದಲ್ಲಿ ಅಪಾಯವಿರುತ್ತೆ.
ಆದ್ದರಿಂದ ಜನನದ ನಂತರ, ತಾಯಿಗೆ ಅಗತ್ಯ ಔಷಧಿಗಳನ್ನು ಸಹ ನೀಡಲಾಗುತ್ತದೆ. ಸಿಸೇರಿಯನ್ ಸೋಂಕು ಹರಡುವಿಕೆಯ ಅಪಾಯ ಹೆಚ್ಚಿಸುತ್ತದೆ ಮತ್ತು ಈ ಸಮಯದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂದು ಹೇಳಿದರು.
ವೈದ್ಯರ ಪ್ರಕಾರ, ಗರ್ಭಾವಸ್ಥೆಯಲ್ಲಿ ಹೆಚ್ಐವಿ ಸೋಂಕನ್ನು ನಿಯತಕಾಲಿಕವಾಗಿ ಪರೀಕ್ಷಿಸಲಾಗುತ್ತದೆ. ಚಿಕಿತ್ಸೆ ನೀಡಲಾಗುತ್ತದೆ. ಆದರೆ, ಹೆರಿಗೆಯ ಸಮಯದಲ್ಲಿ ಅಪಾಯವು ಹೆಚ್ಚಾಗಿರುತ್ತದೆ.