ಕರ್ನಾಟಕ

karnataka

ETV Bharat / bharat

ಕೊರೊನಾ​ ಗೆದ್ದ ಏಡ್ಸ್​ ರೋಗಿ... ಡಿಸ್ಚಾರ್ಜ್​ ಆಗ್ತಿದ್ದಂತೆ ಹೂವಿನ ಸುರಿಮಳೆ! - ಏಡ್ಸ್​ನಿಂದ ಬಳಲುತ್ತಿದ್ದ ವ್ಯಕ್ತಿ

ಮಾರಕ ರೋಗ ಏಡ್ಸ್​ನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಡೆಡ್ಲಿ ವೈರಸ್​ ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆದ್ದಿದ್ದಾರೆ.

HIV+ Gujarat youth beats Covid-19
HIV+ Gujarat youth beats Covid-19

By

Published : May 5, 2020, 12:58 PM IST

ಅಹಮದಾಬಾದ್​: ಏಡ್ಸ್​​ನಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಪವಾಡ ರೀತಿಯಲ್ಲಿ ಕೊರೊನಾ ಸೋಂಕಿನಿಂದ ಪಾರಾಗಿದ್ದಾನೆ.

ಅಹಮದಾಬಾದ್​ನ ಕುಮಾರ್​ಖಾನ್​ ಗ್ರಾಮದ 27 ವರ್ಷದ ವ್ಯಕ್ತಿ ಕಳೆದ ಕೆಲ ವರ್ಷಗಳಿಂದ ಹೆಚ್​​ಐವಿ ಸೋಂಕಿನಿಂದ ಬಳಲುತ್ತಿದ್ದರು. ಇವರಿಗೆ ಮಹಾಮಾರಿ ಕೊರೊನಾ ವೈರಸ್​ ಕೂಡ ತಗುಲಿದ್ದು, ಸಾವನ್ನಪ್ಪುವುದು ಖಚಿತ ಎಂದು ಹೇಳಲಾಗ್ತಿತ್ತು.

ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ದಾಖಲಾಗದ ಅವರು ಡೆಡ್ಲಿ ವೈರಸ್​ನಿಂದ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ಈ ವೇಳೆ, ಸ್ಥಳೀಯ ಜನರು ಅವರ ಮೇಲೆ ಹೂಮಳೆ ಸುರಿದಿದ್ದಾರೆ.

ಇದೇ ವಿಷಯವಾಗಿ ಮಾತನಾಡಿರುವ ಸರ್ಕಾರಿ ಸಿವಿಲ್​​ ಆಸ್ಪತ್ರೆ ವೈದ್ಯರು ಇದೊಂದು ನಮಗೆ ದೊಡ್ಡ ಸಮಸ್ಯೆಯಾಗಿತ್ತು. ಕೇವಲ 20 ದಿನದಲ್ಲಿ ಮೂರು ಸಲ ರಕ್ತ ಮರುಪೂರಣ ಮಾಡಲಾಗಿತ್ತು, ಆತನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಚಿಕಿತ್ಸೆ ನೀಡಲಾಗಿತ್ತು ಎಂದಿದ್ದಾರೆ. ಹೀಗಾಗಿ ಕೊರೊನಾ ವಿರುದ್ಧ ಹೋರಾಟ ನಡೆಸಿ ಆತ ಗುಣಮುಖನಾಗಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details