ಭದ್ರಾಕ್ (ಒಡಿಶಾ): ಕೊರೊನಾ ಹೊಡೆತ ದೇಶದ ಎಲ್ಲರಿಗೂ ಒಂದೇ ರೀತಿ ಪರಿಣಾಮ ಬೀರಿದೆ. ಈವರೆಗೆ ಹಾಗೋ ಹೀಗೋ ಜೀವನ ನಡೆಸುತ್ತಿದ್ದ ಲೈಂಗಿಕ ಅಲ್ಪಸಂಖ್ಯಾತರು ಈಗ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಕೊರೊನಾ ಹೊಡೆತ: ಸಂಕಷ್ಟದಲ್ಲಿ ಲೈಂಗಿಕ ಅಲ್ಪಸಂಖ್ಯಾತರು - ಒಡಿಶಾ
ಭದ್ರಾಕ್‌ನಲ್ಲಿರುವ ಈ ಸಮುದಾಯದ ಸದಸ್ಯರು ಬಹಳ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಗೆ ಹಪಹಪಿಸುವ ಹಾಗಾಗಿದೆ. ಸರ್ಕಾರದಿಂದ ಈವರೆಗೂ ತಮಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ದೂರುತ್ತಿದ್ದಾರೆ ಈ ಅಲ್ಬಸಂಖ್ಯಾತರು.
ಭದ್ರಾಕ್‌ನಲ್ಲಿರುವ ಈ ಸಮುದಾಯದ ಸದಸ್ಯರು ಬಹಳ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆಗೆ ಹಪಹಪಿಸುವ ಹಾಗಾಗಿದೆ. ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ನಮಗೆ ಉದ್ಯೋಗವಿಲ್ಲ. ನಾವು ಹೇಗೆ ಈವರೆಗೆ ಬದುಕುಳಿದಿದ್ದೇವೆ ಎಂಬುದು ನಮಗೆ ಮಾತ್ರ ಗೊತ್ತು. ನಮ್ಮ ಸಮಸ್ಯೆಗಳನ್ನು ಸರ್ಕಾರ ಆಲಿಸುತ್ತಿಲ್ಲ ಅಂದ ಮೇಲೆ ಬೇರೆ ಯಾರು ತಾನೆ ನಮ್ಮ ಸಮಸ್ಯೆ ಆಲಿಸುತ್ತಾರೆ ಎಂದು ಸುನಿತಾ ಎಂಬುವವರು ಪ್ರಶ್ನೆ ಮಾಡಿದ್ದಾರೆ.
ಸರ್ಕಾರವು ತಮ್ಮ ಸಮುದಾಯಕ್ಕೆ ಮತದಾರರ ಚೀಟಿ, ಆಧಾರ್ ಕಾರ್ಡ್ ಇತ್ಯಾದಿಗಳನ್ನು ಒದಗಿಸಿದ್ದರೂ ಇದುವರೆಗೆ ಯಾವುದೇ ಸಹಾಯ ದೊರೆತಿಲ್ಲ ಎನ್ನುತ್ತಾರೆ ಮತ್ತೊಬ್ಬ ಸದಸ್ಯೆ ಸಂಜನಾ. ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ. ಈವರೆಗೂ ನಮಗೆ ಯಾವುದೇ ಸಹಕಾರ ಸಿಕ್ಕಿಲ್ಲ. ಈ ಬಿಕ್ಕಟ್ಟಿನ ಮಧ್ಯೆ ನಮಗೆ ಆಹಾರ, ವಾಸಿಸಲು ಸ್ಥಳ ಮತ್ತು ಆದಾಯದ ಮೂಲವೂ ಇಲ್ಲ. ಸರ್ಕಾರ ನಮಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.