ಕರ್ನಾಟಕ

karnataka

ETV Bharat / bharat

ಐತಿಹಾಸಿಕ ಜಾಸೇರಿ ತಲಾಬ್: ಬರಗಾಲದಲ್ಲೂ ಜೀವಜಲ ಒದಗಿಸಿ ಅಚ್ಚರಿ ಮೂಡಿಸುವ ಕೊಳ!

ಸುತ್ತಮುತ್ತಲಿನ ನದಿಗಳ ನೀರು ಹರಿಯುವ ಸ್ಥಳದಲ್ಲಿ ಕೊಳವನ್ನು ನಿರ್ಮಿಸಲಾಗಿದ್ದು, ಸುತ್ತಮುತ್ತಲಿನ ಭೂಮಿಯಿಂದ ಬರುವ ನೀರಿನ ಜೊತೆಗೆ, ನಯವಾದ ಮಣ್ಣು ಇಲ್ಲಿ ಸಿಗುತ್ತದೆ. ಜೈಸಲ್ಮೇರ್​ ಜಿಲ್ಲೆಯಲ್ಲಿರುವ ಜಾಸೇರಿ ತಲಾಬ್​ ಕೊಳ ತೀವ್ರ ಬರಗಲಾದಲ್ಲೂ ನೀರೊದಗಿಸುತ್ತದೆ. ಇದಕ್ಕೊಂದು ಭವ್ಯ ಇತಿಹಾಸವೇ ಇದೆ..

Historical Jaseri Talab in rajastana
ಐತಿಹಾಸಿಕ ಜಾಸೇರಿ ತಲಾಬ್

By

Published : Sep 8, 2020, 6:02 AM IST

ರಾಜಸ್ಥಾನ:ಜೈಸಲ್ಮೇರ್ ಜಿಲ್ಲಾ ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಕುಲಧಾರ ಖಭಾ ರಸ್ತೆಯಲ್ಲಿರುವ ದೇಧಾ ಗ್ರಾಮದ ಐತಿಹಾಸಿಕ ಜಾಸೇರಿ ತಲಾಬ್, ಪಾಲಿವಾಲ್ ಸಂಸ್ಕೃತಿಯ ಸಂಕೇತವಾಗಿದೆ. ಈ ಕೊಳವು ಹತ್ತಿರದ ಹಲವಾರು ಹಳ್ಳಿಗಳಿಗೆ ನೀರು ಒದಗಿಸುತ್ತದೆ. ಅಲ್ಲದೇ ಪ್ರಾಣಿ-ಪಕ್ಷಿಗಳಿಗೂ ಜೀವಜಲ ನೀಡುತ್ತದೆ.

ಗ್ರಾಮಸ್ಥರು ಮತ್ತು ಇತಿಹಾಸಕಾರರ ಪ್ರಕಾರ, ಜಸ್ಬಾಯ್ ಅವರ ಮಾವ 400 ವರ್ಷಗಳ ಹಿಂದೆ ಮೈದುನನಿಂದ ನಿಂದನೆಗೆ ಒಳಗಾಗಿದ್ದ ಮಗಳಿಗಾಗಿ ಈ ಕೊಳವನ್ನು ಅಗೆದಿದ್ದರು ಎಂಬ ಪ್ರತೀತಿ ಇದೆ.

ಎಂದೂ ಬತ್ತದ ಜಲ ಮೂಲ ಈ ಐತಿಹಾಸಿಕ ಜಾಸೇರಿ ತಲಾಬ್...

ಈ ಕೊಳವನ್ನು ನಿರ್ಮಿಸಿದಾಗಿನಿಂದಲೂ, ಅದರ ನೀರು ಒಣಗಿಲ್ಲ. ಒಮ್ಮೆ 1971 ರಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಆ ಸಮಯದಲ್ಲಿ ನೀರು ಕಡಿಮೆಯಾಗಿತ್ತು. ಆದರೆ ಇನ್ನೂ ಸಹ ನೀರು ಸಂಪೂರ್ಣ ಒಣಗಿರುವುದನ್ನು ಯಾರೂ ನೋಡಿರುವ ಉದಾಹರಣೆಗಳಿಲ್ಲ.

ಅಂತರ್ಜಲ ವಿಜ್ಞಾನಿಗಳ ಪ್ರಕಾರ, ಕೊಳವು ಒಣಗದಿರಲು ಹಲವು ಕಾರಣಗಳಿವೆ. ಸುತ್ತಮುತ್ತಲಿನ ನದಿಗಳ ನೀರು ಹರಿಯುವ ಸ್ಥಳದಲ್ಲಿ ಕೊಳವನ್ನು ನಿರ್ಮಿಸಲಾಗಿದೆ. ಕೊಳದ ಭರ್ತಿ ಪ್ರದೇಶವೂ ಹೆಚ್ಚಾಗಿದೆ. ಸುತ್ತಮುತ್ತಲಿನ ಭೂಮಿಯಿಂದ ಬರುವ ನೀರಿನ ಜೊತೆಗೆ, ನಯವಾದ ಮಣ್ಣು ಸಿಗುತ್ತದೆ.

ಕೊಳದ ಕೆಳಭಾಗದಲ್ಲಿ ಆ ಮಣ್ಣು ಸಂಗ್ರಹವಾಗುತ್ತದೆ. ಅದಕ್ಕಾಗಿಯೇ ಕೊಳದ ನೀರು ಬೇಗನೇ ಒಣಗುವುದಿಲ್ಲ. ಅಲ್ಲದೇ ಇದು ಹತ್ತಾರು ಹಳ್ಳಿಗಳ ಜನರಿಗೆ ನೂರಾರು ವರ್ಷಗಳಿಂದಲೂ ಜೀವಜಲವನ್ನು ಒದಗಿಸುತ್ತಿದೆ.

ಮರುಭೂಮಿಯಲ್ಲಿ ಪ್ರತಿಯೊಂದು ಹನಿ ನೀರು ಸಹ ಮುಖ್ಯವಾಗಿದೆ. ಜಾಸೇರಿ ಕೊಳವು ನೀರಿನ ಸಂರಕ್ಷಣೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ಐತಿಹಾಸಿಕ ಕೊಳದ ಛಾಯಾಚಿತ್ರವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಪ್ರದರ್ಶಿಸಲಾಗಿದೆ.

ಇದು ರಾಜಸ್ಥಾನದ ಸಾಂಪ್ರದಾಯಿಕ ಕುಡಿಯುವ ನೀರಿನ ಮೂಲಗಳ ಶ್ರೀಮಂತ ಸಂಸ್ಕೃತಿಯ ಬಗ್ಗೆ ಸಾರುತ್ತದೆ. ಈ ಕೊಳವನ್ನು ನೋಡಲು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಒಟ್ಟಿನಲ್ಲಿ ನೂರಾರು ವರ್ಷಗಳ ಹಿಂದೆ ಅಗೆದಿದ್ದ ಕೊಳ ಇಂದಿಗೂ ನೀರಿನ ಮೂಲವಾಗಿರುವುದು ಅಚ್ಚರಿ.

ABOUT THE AUTHOR

...view details