ಕರ್ನಾಟಕ

karnataka

ETV Bharat / bharat

CAA ಬಗ್ಗೆ ಪ್ರಚೋದನಾಕಾರಿ ಟ್ವೀಟ್: ನಟ ಫರಾನ್​​ ವಿರುದ್ಧ ಹಿಂದೂ ಸಂಘಟನೆ ದೂರು - ನಟ ಫರಾನ್​ ಅಖ್ತರ್​ ವಿರುದ್ಧ ಹಿಂದೂ ಸಂಘಟನೆ ದೂರು

ತಮ್ಮ ಪ್ರಚೋದನಾಕಾರಿ ಹಾಗೂ ದೇಶದ್ರೋಹಿ ಪೋಸ್ಟ್​ಗಳ ಮೂಲಕ ದಲಿತರು, ಮುಸ್ಲಿಂ, ಮಂಗಳಮುಖಿಯರು, ಭೂಮಿ ಇಲ್ಲದವರು ಹಾಗೂ ನಾಸ್ತಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ಆರೋಪಿಸಿ, ಬಾಲಿವುಡ್​ ನಟ-ನಿರ್ದೇಶಕ ಫರಾನ್​ ಅಖ್ತರ್​ ವಿರುದ್ಧ ಹೈದ್ರಾಬಾದ್​ ಮೂಲದ ವಕೀಲ ಹಾಗೂ ಹಿಂದೂ ಸಂಘಟನೆ ಸ್ಥಾಪಕ ಕರುಣಾ ಸಾಗರ್​, ಸೈದಾಬಾದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Farhan Akhtar
ನಟ ಫರಾನ್​ ಅಖ್ತರ್

By

Published : Dec 21, 2019, 5:03 AM IST

ಹೈದರಾಬಾದ್​: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರಚೋದನಾಕಾರಿ ಟ್ವೀಟ್​ ಮಾಡಿದ್ದಾರೆಂದು ಆರೋಪಿಸಿ, ಬಾಲಿವುಡ್​ ನಟ-ನಿರ್ದೇಶಕ ಫರಾನ್​ ಅಖ್ತರ್​ ವಿರುದ್ಧ ಹೈದರಾಬಾದ್​ನಲ್ಲಿ ಹಿಂದೂ ಸಂಘಟನೆ ದೂರು ದಾಖಲಿಸಿದೆ.

ಹೈದರಾಬಾದ್​ ಮೂಲದ ವಕೀಲ ಹಾಗೂ ಹಿಂದೂ ಸಂಘಟನೆ ಸ್ಥಾಪಕ ಕರುಣಾ ಸಾಗರ್​, ಸೈದಾಬಾದ್​ ಪೊಲೀಸ್​ ಠಾಣೆಯಲ್ಲಿ ಫರಾನ್​ ಅಖ್ತರ್​ ವಿರುದ್ಧ ದೂರು ದಾಖಲಿಸಿದ್ದಾರೆ. ಫರಾನ್​ ಅಖ್ತರ್, ತಮ್ಮ ಪ್ರಚೋದನಾಕಾರಿ ಹಾಗೂ ದೇಶದ್ರೋಹಿ ಪೋಸ್ಟ್​ಗಳ ಮೂಲಕ ದಲಿತರು, ಮುಸ್ಲಿಂ, ಮಂಗಳಮುಖಿಯರು, ಭೂಮಿ ಇಲ್ಲದವರು ಹಾಗೂ ನಾಸ್ತಿಕರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಇವರೆಲ್ಲರನ್ನು ಯಾವುದೇ ದಾಖಲೆಗಳಿಲ್ಲದೆ ಗಡಿಪಾರು ಮಾಡಿ ಶಿಬಿರಗಳಲ್ಲಿ ಇರಿಸಬಹುದು ಎಂಬ ಸಂದೇಶವಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಪೌರತ್ವ ಕಾಯ್ದೆಯ ನೈಜತೆಯನ್ನು ತಿರುಚುತ್ತಿದ್ದಾರೆ ಎಂದು ಕರುಣಾ ಸಾಗರ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೈದಾಬಾದ್​ ಪೊಲೀಸ್ ಇನ್ಸ್​​ಪೆಕ್ಟರ್​, ದೂರು ಸ್ವೀಕರಿಸಿದ್ದು, ಈ ಕುರಿತು ಪರಿಶೀಲನೆ ನಡೆಸುತ್ತಿರುವುದಾಗಿ ಹಾಗೂ ಇದರ ವಿರುದ್ಧ ಪ್ರಕರಣ ದಾಖಲಾಗಬೇಕಾದರೆ ಕಾನೂನು ಅಭಿಪ್ರಾಯದ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details