ಕರ್ನಾಟಕ

karnataka

ETV Bharat / bharat

ಬೆಳ್ಳಂಬೆಳಗ್ಗೆ ಹರಿದ ನೆತ್ತರು: ವಿಶ್ವ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷಗೆ ಗುಂಡಿಟ್ಟು ಹತ್ಯೆ - ವಿಶ್ವ ಹಿಂದೂ ಮಹಾಸಭಾದ ರಾಜ್ಯ ಅಧ್ಯಕ್ಷಗೆ ಗುಂಡೇಟು

ಬೆಳ್ಳಂಬೆಳಗ್ಗೆ ಉತ್ತರ ಪ್ರದೇಶದ ಲಕ್ನೋನಲ್ಲಿ ನೆತ್ತರು ಹರಿದಿದೆ. ವಿಶ್ವ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್ ಬಚ್ಚನ್ ಅವರ ಮೇಲೆ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದಾರೆ.

hindu masabha president ranjeet bachchan shot dead
ವಿಶ್ವ ಹಿಂದೂ ಮಹಾಸಭಾದ ಅಧ್ಯಕ್ಷಗೆ ಗುಂಡಿಟ್ಟು ಹತ್ಯೆ

By

Published : Feb 2, 2020, 10:39 AM IST

ಲಕ್ನೋ(ಉತ್ತರ ಪ್ರದೇಶ): ವಿಶ್ವ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್ ಬಚ್ಚನ್​ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರದ ಹಜರತ್​ಗಂಜ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬೈಕ್​ನಲ್ಲಿ ಬಂದ ದುಷ್ಕರ್ಮಿಗಳು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ರಂಜಿತ್ ಬಚ್ಚನ್ ತಲೆಗೆ ಗುಂಡಿಕ್ಕಿ ಕೊಲೆಗೈದಿದ್ದಾರೆ. ದಾಳಿ ವೇಳೆ ರಂಜಿತ್ ಅವರ ಸಹೋದರ ಕೂಡ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋರಖ್​ಪುರ್​​ದ ನಿವಾಸಿಯಾಗಿರುವ ರಂಜಿತ್ ಅವರ ಕೊಲೆ ಪ್ರಕರಣ ರಾಜಧಾನಿಯಲ್ಲಿ ಆತಂಕ ಮೂಡಿಸಿದೆ. ರಂಜಿತ್ ಕೊಲೆಗೈದವರ ಪತ್ತೆಗೆ ತಂಡ ರಚಿಸಿ, ತನಿಖೆ ಕೈಗೊಂಡಿದ್ದಾಗಿ ಲಕ್ನೋ ಡಿಸಿಪಿ ದಿನೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details