ಕರ್ನಾಟಕ

karnataka

ETV Bharat / bharat

ಗಾಂಧಿ ಹಂತಕ 'ಗೋಡ್ಸೆ' ಹೆಸರಲ್ಲಿ ಗ್ರಂಥಾಲಯ ತೆರೆದ ಹಿಂದೂ ಮಹಾಸಭಾ

ಗೋಡ್ಸೆ ಜೀ ಅವರು ಏಕೆ ದೇಶದ ವಿಭಜನೆಯನ್ನು ವಿರೋಧಿಸಿದರು, ಏಕೆ ಅದರ ವಿರುದ್ಧ ಪ್ರತಿಕಾರ ತೆಗೆದುಕೊಂಡರು ಎನ್ನುವುದನ್ನು ಯುವಕರಿಗೆ ತಿಳಿಸುವ ಉದ್ದೇಶದಿಂದ ನಾಥುರಾಮ್ ಗೋಡ್ಸೆ ಹೆಸರಲ್ಲಿ ಲೈಬ್ರರಿ ತೆರೆಯಲಾಗಿದೆ ಎಂದು ಜೈವೀರ್ ಭಾರದ್ವಾಜ್ ಹೇಳಿದ್ದಾರೆ.

Hindu Mahasabha opens Nathuram Godse library in MP's Gwalior
ನಾಥುರಾಮ್ ಗೋಡ್ಸೆ ಗ್ರಂಥಾಲಯ

By

Published : Jan 11, 2021, 10:20 AM IST

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆಗೆ ಸಮರ್ಪಣವಾಗಿ ಅಖಿಲ ಭಾರತೀಯ ಹಿಂದೂ ಮಹಾಸಭಾವು ಗ್ರಂಥಾಲಯವನ್ನು ತೆರೆದಿದೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಹಿಂದೂ ಮಹಾಸಭಾವು ತ್ಯಾಗವನ್ನು ಮಾಡಿದ್ದರೆ, ಜವಹರಲಾಲ್​ ನೆಹರೂ ಹಾಗೂ ಮೊಹಮ್ಮದ್ ಅಲಿ ಜಿನ್ನಾರನ್ನ ಪ್ರಧಾನ ಮಂತ್ರಿಗಳನ್ನಾಗಿ ಮಾಡಲು ಕಾಂಗ್ರೆಸ್ ದೇಶದ ವಿಭಜನೆ ಮಾಡಿತ್ತು. ಈ ಅಧ್ಯಯನ ಕೇಂದ್ರವು ಯುವ ಪೀಳಿಗೆಗೆ ಭಾರತದ ವಿಭಜನೆ ಕುರಿತ ಮಾಹಿತಿಯನ್ನು ತಿಳಿಸುತ್ತದೆ ಮತ್ತು ವಿವಿಧ ರಾಷ್ಟ್ರೀಯ ನಾಯಕರ ಬಗ್ಗೆ ಜ್ಞಾನವನ್ನು ಹರಡುತ್ತದೆ ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಜೈವೀರ್ ಭಾರದ್ವಾಜ್ ತಿಳಿಸಿದರು.

ನಾಥುರಾಮ್ ಗೋಡ್ಸೆ ಗ್ರಂಥಾಲಯ

ಇಂದು ನಾವು ಯುವಜನತೆಗೆ ರಾಷ್ಟ್ರೀಯತೆ ಬಗೆಗೆ ಸತ್ಯ ಹಾಗೂ ಅವರ ಜವಾಬ್ದಾರಿ ಏನೆಂಬುದನ್ನು ಅರಿಯುವಂತೆ ಮಾಡಬೇಕು. ಗೋಡ್ಸೆ ಜೀ ಅವರು ಏಕೆ ದೇಶದ ವಿಭಜನೆಯನ್ನು ವಿರೋಧಿಸಿದರು, ಏಕೆ ಅದರ ವಿರುದ್ಧ ಪ್ರತಿಕಾರ ತೆಗೆದುಕೊಂಡರು ಎನ್ನುವುದನ್ನು ಯುವಕರಿಗೆ ತಿಳಿಸುವ ಉದ್ದೇಶದಿಂದ ಈ ಲೈಬ್ರರಿ ತೆರೆಯಲಾಗಿದೆ ಎಂದು ಜೈವೀರ್ ಹೇಳಿದರು.

ಇದನ್ನೂ ಓದಿ: ಜ.26ರಂದು ಆಫ್ರಿಕಾದ ಕಿಲಿಮಂಜಾರೋ ಪರ್ವತವನ್ನೇರಿ ತ್ರಿವರ್ಣ ಧ್ವಜ ಹಾರಿಸಲಿರುವ ಯುವ ಪರ್ವತಾರೋಹಿ

ಗ್ವಾಲಿಯರ್​ನಲ್ಲಿ ಗೋಡ್ಸೆ ತರಬೇತಿಯನ್ನು ಪಡೆದಿದ್ದರು ಹಾಗೂ ಪಿಸ್ತೂಲ್​​​ ಅನ್ನು ಖರೀದಿಸಿದ್ದರು. ಬಳಿಕ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿಗೆ ಹೋದರು. ಮೊದಲ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಲಿಲ್ಲ. ಗಾಂಧೀಜಿಯವರು ಗೋಡ್ಸೆಯನ್ನು ಭೇಟಿಯಾದಾಗ ನಂತರ ಪ್ರತೀಕಾರ ತೀರಿಸಿಕೊಳ್ಳುವ ನಿರ್ಣಯ ಪೂರೈಸಿದರು ಎಂದು ಜೈವೀರ್ ಭಾರದ್ವಾಜ್ ಸಮರ್ಥಿಸಿಕೊಂಡರು.

ABOUT THE AUTHOR

...view details