ಮುಂಬೈ(ಮಹಾರಾಷ್ಟ್ರ):ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ ದಬಾಂಗ್ 3 ಬಿಡುಗಡೆಗೂ ಮುನ್ನವೇ ಸಿನಿಮಾ ವಿರುದ್ಧ ಮಹಾರಾಷ್ಟ್ರದ ಹಿಂದೂ ಜನಜಾಗೃತಿ ಸಮಿತಿ ಪ್ರತಿಭಟನೆ ನಡೆಸಿದೆ. ಹಿಂದೂ ಸಾಧುಗಳ (ಸನ್ಯಾಸಿಗಳು) ಕುರಿತು ಅಸಭ್ಯವಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ದೃಶ್ಯವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗಿದೆ.
ಈ ಸಂಬಂಧ ಪ್ರತಿಕ್ರಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ಅರವಿಂದ್ ಪನ್ಸಾರೆ, ದಬಾಂಗ್ 3 ಸಿನಿಮಾದಲ್ಲಿ ಹಿಂದೂ ಸಾಧುಗಳು ಗಿಟಾರ್ ಹಿಡಿದುಕೊಂಡು ಕನ್ನಡಕಗಳನ್ನು ಧರಿಸಿ ನೃತ್ಯ ಮಾಡುತ್ತಿರುವಂತೆ ಅಸಭ್ಯ ಚಿತ್ರಣವನ್ನು ಚಿತ್ರಿಸಿರುವ ದೃಶ್ಯ ಈ ಸಿನಿಮಾದಲ್ಲಿದೆ ಎನ್ನಲಾಗ್ತಿದೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ. ಸಾಧುಗಳನ್ನು ಹಿಂದೂ ಧರ್ಮದಲ್ಲಿ ಗೌರವದಿಂದ ನೋಡಲಾಗುತ್ತದೆ. ಹೀಗಾಗಿ ಈ ರೀತಿಯ ಚಿತ್ರಣಗಳನ್ನು ನಾವು ಸಹಿಸುವುದಿಲ್ಲ. ಈ ದೃಶ್ಯವನ್ನು ಸಿನಿಮಾದಿಂದ ತೆಗೆದುಹಾಕುವವರೆಗೂ ದೇಶಾದ್ಯಂತ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಕಿಡಿಕಾರಿದ್ದಾರೆ.