ಮುಂಬೈ :ಶನಿವಾರ ಹಿರಿಯ ಬಾಲಿವುಡ್ ಮತ್ತು ದೂರದರ್ಶನ ನಟಿ ಹಿಮಾನಿ ಶಿವಪುರಿ ಅವರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಹಾಗಾಗಿ ನಗರದ ಆಸ್ಪತ್ರೆಯಿಂದ ಅವರು ಬಿಡುಗಡೆಯಾಗಿದ್ದಾರೆ.
ಕೋವಿಡ್-19ನಿಂದ ಗುಣಮುಖರಾದ ನಟಿ ಹಿಮಾನಿ ಶಿವಪುರಿ ಆಸ್ಪತ್ರೆಯಿಂದ ಬಿಡುಗಡೆ - ನಟಿ ಹಿಮಾನಿ ಶಿವಪುರಿ ಅವರಿಗೆ ಕೊರೊನಾ ಸೋಂಕು
59 ವರ್ಷದ ನಟಿ ಸೆಪ್ಟೆಂಬರ್ 12ರಂದು ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ದಾಖಲಾಗಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಇರುವುದರಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗಬಹುದೆಂದು ವೈದ್ಯರು ಸಲಹೆ ನೀಡಿದ್ದಾರೆ..
59 ವರ್ಷದ ನಟಿ ಸೆಪ್ಟೆಂಬರ್ 12ರಂದು ಹೋಲಿ ಸ್ಪಿರಿಟ್ ಆಸ್ಪತ್ರೆಯಲ್ಲಿ ದಾಖಲಾಗಿ ಕೊರೊನಾ ವೈರಸ್‌ಗೆ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಇರುವುದರಿಂದ ಮನೆಯಲ್ಲಿಯೇ ಕ್ವಾರಂಟೈನ್ ಆಗಬಹುದೆಂದು ವೈದ್ಯರು ಸಲಹೆ ನೀಡಿದ್ದಾರೆ ಎಂದು ಶಿವಪುರಿ ಹೇಳಿದ್ದಾರೆ.
'ಸದ್ಯ ನನ್ನ ಆರೋಗ್ಯದಲ್ಲಿ ಸುಧಾರಣೆ ಇದೆ ಮತ್ತು ನಾನು 15 ದಿನಗಳ ಕಾಲ ಮನೆಯವರ ಸಂಪರ್ಕ ತಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಕ್ವಾರಂಟೈನ್ ನಂತರ ನಾನು ಮತ್ತೆ ಪರೀಕ್ಷೆಗೆ ಒಳಗಾಗುತ್ತೇನೆ' ಎಂದು ಶಿವಪುರಿ ಪಿಟಿಐಗೆ ತಿಳಿಸಿದರು. ಶುಕ್ರವಾರ, ನಟಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ಆರೋಗ್ಯ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿ ಟ್ವೀಟ್ ಮಾಡಿದ್ದಾರೆ.