ಶಿಮ್ಲಾ:ಹಿಮಾಚಲ ಪ್ರದೇಶದ ತಲಾ ಆದಾಯವು ರಾಷ್ಟ್ರೀಯ ತಲಾ ಆದಾಯಕ್ಕಿಂತ 60,205 ರೂ. ಹೆಚ್ಚಾಗಿದೆ ಎಂದು ರಾಜ್ಯಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪ್ರಕಟಿಸಿದ್ದಾರೆ.
ಈ ರಾಜ್ಯದ ತಲಾ ಆದಾಯ ರಾಷ್ಟ್ರೀಯ ಆದಾಯಕ್ಕಿಂತ ಹೆಚ್ಚಿದೆಯಂತೆ
ಹಿಮಾಚಲ ಪ್ರದೇಶದ ತಲಾ ಆದಾಯವು ರಾಷ್ಟ್ರೀಯ ತಲಾ ಆದಾಯಕ್ಕಿಂತ 60,205 ರೂ. ಹೆಚ್ಚಾಗಿದೆ ಎಂದು ರಾಜ್ಯಸಭೆಯಲ್ಲಿ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಹೇಳಿದ್ದಾರೆ
ರಾಜ್ಯದ ತಲಾ ಆದಾಯವು ಶೇಕಡಾ 6.6 ರಷ್ಟು ಹೆಚ್ಚಳವಾಗಿದ್ದು, 2019-20ರಲ್ಲಿ 12,147 ರೂ.ಗಳಿಂದ 1,95,255 ರೂ.ಗೆ ಏರಿಕೆಯಾಗಿದೆ. ಹಿಂದಿನ ಹಣಕಾಸು ವರ್ಷದಲ್ಲಿ 1,83,108 ರಷ್ಟಿತ್ತು. ಅದೇ ಹಣಕಾಸು ವರ್ಷದಲ್ಲಿ ತಲಾ ನಿವ್ವಳ ರಾಷ್ಟ್ರೀಯ ಆದಾಯ 1,35,050 ರಷ್ಟಾಗಿದೆ ಎಂದರು.
ರಾಜ್ಯದಲ್ಲಿ ಈವರೆಗೆ 50,000 ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದು, ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಹೆಚ್ಚಿನ ರೈತರನ್ನು ಉತ್ತೇಜಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕಾಗಿ 2020-21ರಲ್ಲಿ 25 ಕೋಟಿ ರೂಗಳನ್ನು ಮೀಸಲಿಡಲಾಗಿದೆ. 5 ಟ್ರಿಲಿಯನ್ ಡಾಲರ್ ಆರ್ಥಿಕ ಗುರಿ ಸಾಧಿಸಲು ಹಿಮಾಚಲ ಕೊಡುಗೆ ನೀಡಲಿದೆ ಎಂದು ಠಾಕೂರ್ ಹೇಳಿದರು.