ಶಿಮ್ಲಾ (ಹಿಮಾಚಲ ಪ್ರದೇಶ): ಆಫ್ - ಸೀಸನ್ ತರಕಾರಿ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡುವ ಹಿಮಾಚಲ ಪ್ರದೇಶವು ಮೂರು ತಿಂಗಳ ಲಾಕ್‌ಡೌನ್ ಮಧ್ಯೆ ಸುಮಾರು 6.82 ಲಕ್ಷ ಕ್ವಿಂಟಾಲ್ ಬಟಾಣಿ, ಹೂಕೋಸು ಮತ್ತು ಇತರ ತರಕಾರಿಗಳನ್ನು ನೆರೆಯ ರಾಜ್ಯಗಳಿಗೆ ಮಾರಾಟ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ನಡುವೆ 6.82 ಲಕ್ಷ ಕ್ವಿಂಟಾಲ್ ತರಕಾರಿ ಮಾರಾಟ ಮಾಡಿದ ಹಿಮಾಚಲ ಪ್ರದೇಶ! - ರಾಜ್ಯ ಕೃಷಿ ಇಲಾಖೆ
ಮೂರು ತಿಂಗಳ ಲಾಕ್‌ಡೌನ್ ಮಧ್ಯೆ ಹಿಮಾಚಲ ಪ್ರದೇಶ ಸುಮಾರು 6.82 ಲಕ್ಷ ಕ್ವಿಂಟಾಲ್ ತರಕಾರಿಗಳನ್ನು ನೆರೆಯ ರಾಜ್ಯಗಳಿಗೆ ಮಾರಾಟ ಮಾಡಿದೆ. ಹಿಮಾಚಲ ಪ್ರದೇಶ ಕೃಷಿ ಇಲಾಖೆ ಕೃಷಿ ಉತ್ಪನ್ನಗಳ ಸಾಗಣೆಗೆ 'ಕಿಸಾನ್ ರಥ್' ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಇದು ರೈತರಿಗೆ ನೆರವಾಗಿದೆ.
vegetable
ರಾಜ್ಯ ಕೃಷಿ ಇಲಾಖೆ ರೈತರಿಗೆ ತರಕಾರಿಗಳನ್ನು ಕಳುಹಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡುತ್ತಿದೆ. ಇದರ ಪರಿಣಾಮವಾಗಿ ರೈತರು ತಮ್ಮ ಉತ್ಪನ್ನಗಳಿಂದ ಉತ್ತಮ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಿಮಾಚಲ ಪ್ರದೇಶ ಕೃಷಿ ಇಲಾಖೆ ಕೃಷಿ ಉತ್ಪನ್ನಗಳ ಸಾಗಣೆಗೆ 'ಕಿಸಾನ್ ರಥ್' ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಈ ಆ್ಯಪ್ ಮೂಲಕ ಟ್ರಕ್‌ಗಳ ಲಭ್ಯತೆಯ ಬಗ್ಗೆ ರೈತರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.