ಕರ್ನಾಟಕ

karnataka

ETV Bharat / bharat

ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!! - Himachal Pradesh

ದಟ್ಟ ಮಂಜಿನ ಹೊದಿಕೆ ಹೊದ್ದಿರುವ ಶಿಮ್ಲಾ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಎಲ್ಲೆಡೆ ಶುಬ್ರ ಬಿಳುಪಿನ ಮಂಜು ಹಸಿರೆಲೆ ಮೇಲೆ ಮೊಸರುಚಲ್ಲಿದಂತೆ ಭಾಸವಾಗುತ್ತಿದೆ.

Himachal Pradesh: Mandhol village in Shimla district received snowfall today
ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!!

By

Published : Feb 21, 2020, 8:56 AM IST

ಶಿಮ್ಲಾ(ಹಿಮಾಚಲ್ ಪ್ರದೇಶ):ದಟ್ಟ ಮಂಜಿನ ಹೊದಿಕೆ ಹೊದ್ದಿರುವ ಶಿಮ್ಲಾ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಎಲ್ಲೆಡೆ ಶುಭ್ರ ಬಿಳುಪಿನ ಮಂಜು ಹಸಿರೆಲೆ ಮೇಲೆ ಮೊಸರು ಚಲ್ಲಿದಂತೆ ಭಾಸವಾಗುತ್ತಿದೆ.

ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!!
ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!!

ಶಿಮ್ಲಾದ ಪ್ರಮುಖ ಪ್ರವಾಸಿ ತಾಣಗಳಾಗಿರುವ ನರ್ಕಂದ, ಕುಫ್ರಿ, ಖರಪಥರ್​ ಪ್ರದೇಶಗಳಂತು ಮಂಜಿನಿಂದ ಆವೃತವಾಗಿರುವ ಪರಿ ಶ್ವೇತಾಂಬರಿಗೆ ಶರಣಾದಂತೆ ತೋರುತ್ತದೆ. ಇಲ್ಲಿ ಭೂಮಿ, ಬಾನು, ಮರಗಿಡ, ಕಟ್ಟಡ ಎಲ್ಲವೂ ಒಂದೇ ಪರದೆ ಹೊದ್ದು ಬಂದವರನ್ನು ಇಣುಕಿನೋಡುತ್ತಿವೆಯೇನೋ ಎನಿಸುತ್ತದೆ.

ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!!
ಶ್ವೇತಾಂಬರಿ ಸೌಂದರ್ಯಕ್ಕೆ ಶರಣಾದಂತಿದೆ ಶಿಮ್ಲಾ...!!

ಇವೆಲ್ಲಾ ಒಂದೆಡೆಯಾದರೆ ಮಂಜಿನ ದಟ್ಟಣೆಯಿಂದ ದಾರಿಗಳೇ ಬಂದ್​ ಆಗಿ ಪ್ರಯಾಣ ಕಷ್ಟಸಾಧ್ಯವಾಗಿದ್ದು, ಪ್ರವಾಸಿಗಳು ಮಾತ್ರವಲ್ಲದೇ ಮೂಲ ನಿವಾಸಿಗಳೇ ಪರದಾಡುವಂತಾಗಿದೆ.

ABOUT THE AUTHOR

...view details