ಕರ್ನಾಟಕ

karnataka

ETV Bharat / bharat

ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​​​​​​​​​​​​​​​​​​​​​​​​ ಆದ 14ರ ಬಾಲಕಿ! - ಹೀನಾ ಠಾಕೂರ್​​​

ಎಸ್​ಎಸ್​ಎಲ್​​ಸಿಯಲ್ಲಿ ಬಾಲಕಿ ಹೀನಾ ಠಾಕೂರ್​​​ ಶೇ 94 ರಷ್ಟು ಅಂಕ ಪಡೆದುಕೊಂಡ ಹಿನ್ನೆಲೆ ನಿನ್ನೆ ಒಂದು ದಿನದ ಮಟ್ಟಿಗೆ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು.

Hina Thakur
ಉಪವಿಭಾಗಾಧಿಕಾರಿಯಾದ ಬಾಲಕಿ

By

Published : Jun 13, 2020, 7:45 AM IST

Updated : Jun 13, 2020, 7:57 AM IST

ಡೆಹರಾಡೂನ್​: 14 ವರ್ಷದ ಬಾಲಕಿ ಹೀನಾ ಠಾಕೂರ್​​​ಗೆ ನಿನ್ನೆ ಒಂದು ದಿನದ ಮಟ್ಟಿಗೆ ಉಪ ವಿಭಾಗಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಎಸ್​ಎಸ್​ಎಲ್​​ಸಿಯಲ್ಲಿ ಬಾಲಕಿ ಹೀನಾ ಶೇ 94 ರಷ್ಟು ಅಂಕ ಪಡೆದುಕೊಂಡ ಹಿನ್ನೆಲೆಯಲ್ಲಿ ಆಕೆಗೆ ಈ ಗೌರವ ಸಿಕ್ಕಿದೆ.

ಅಂದ ಹಾಗೆ ಈ ಬಾಲಕಿ ತಂದೆ ಕಂಗ್ರಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಪ್ಯೂನ್​ ಆಗಿ ಕೆಲಸ ಮಾಡ್ತಿದ್ದಾರೆ. ಇವರ ಮಗಳು 10ನೇ ತರಗತಿಯಲ್ಲಿ ಶೇ 94 ರಷ್ಟು ಅಂಕ ಪಡೆದುಕೊಂಡಿದ್ದರು. ಬಡತನದಲ್ಲೂ ಸಾಧನೆ ಮಾಡಿದ ಬಾಲಕಿಗೆ ಅಲ್ಲಿನ ಉಪವಿಭಾಗಾಧಿಕಾರಿ ಈ ಗೌರವ ನೀಡಿ, ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

ಒಂದು ದಿನ ಸಬ್​ ಡಿವಿಜನಲ್​ ಮ್ಯಾಜಿಸ್ಟ್ರೇಟ್​​​​​​​​​​​​ ಆಗಿ ಕಾರ್ಯ ನಿರ್ವಹಣೆ ಮಾಡಿದ ಬಾಲಕಿ, ಮುಂದೆ ತಾನು ಐಎಎಸ್​ ಅಧಿಕಾರಿ ಆಗಬೇಕು ಎಂಬ ಆಶಯ ಹೊಂದಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ಉಪವಿಭಾಗಾಧಿಕಾರಿ ಜಿತನ್​ ಲಾಲ್​ ಹೇಳಿದ್ದಾರೆ. ಬಾಲಕಿಯ ಕನಸು ಈಡೇರಿಸಲು ಅವಳಿಗೆ ಏಕೆ ಒಂದು ದಿನ ಉಪವಿಭಾಧಿಕಾರಿ ಆಗಿ ಸೇವೆ ಸಲ್ಲಿಸಲು ಅವಕಾಶ ನೀಡಬಾರದು ಎಂದೆನಿಸಿತು. ಹೀಗಾಗಿ ಅವರ ಕನಸು ನನಸು ಮಾಡಲು ಈ ನಿರ್ಧಾರ ಕೈಗೊಂಡೆ ಎಂದು ಅವರು ತಿಳಿಸಿದ್ದಾರೆ.

Last Updated : Jun 13, 2020, 7:57 AM IST

ABOUT THE AUTHOR

...view details