ಕರ್ನಾಟಕ

karnataka

ETV Bharat / bharat

ಯೋಗದಲ್ಲಿ ವಿಶ್ವದಾಖಲೆ ಬರೆದ ಹಿಮಾಚಲದ 11 ವರ್ಷದ ಪೋರಿ

ಹಿಮಾಚಲ ಪ್ರದೇಶದ ಚೇರಿ ಖಿಯುಂಡ್ ಗ್ರಾಮದ ಬಾಲಕಿಯೋರ್ವಳು ಒಂದು ನಿಮಿಷದಲ್ಲಿ ಯೋಗದ 35 ವಿಭಿನ್ನ ಆಸನಗಳನ್ನು ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆ ಬರೆದಳು.

yoga
ಯೋಗದಲ್ಲಿ ವಿಶ್ವ ದಾಖಲೆ

By

Published : Oct 10, 2020, 11:52 AM IST

ಸುಜನ್​​ಪುರ:ಸೆಪ್ಟೆಂಬರ್ 13 ರಂದು ನಿಧಿ ದೋಗ್ರಾ ಎಂಬ ಬಾಲಕಿ ಕೇವಲ ಒಂದು ನಿಮಿಷದಲ್ಲಿ ಯೋಗದ 35 ವಿಭಿನ್ನ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದಲ್ಲಿ ವಿಶೇಷ ದಾಖಲೆ ಮಾಡಿದ್ದಾಳೆ.

ಯೋಗದ ವಿಶೇಷ ಆಸನದ ಪ್ರದರ್ಶನದಲ್ಲಿ ಬಾಲಕಿ ನಿಧಿ

ಅಖಿಲ ಭಾರತ ಯೋಗ ಒಕ್ಕೂಟದ (ಎಬಿವೈಎಂ) ವತಿಯಿಂದ ಆಯೋಜನೆಗೊಂಡಿದ್ದ ವರ್ಚುವಲ್ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿದ ಯೋಗಪಟು ನಿಧಿ, 45 ನಿಮಿಷಗಳ ಕಾಲ ಪ್ರಣವ್ ಆಸನವನ್ನು ಪ್ರದರ್ಶಿಸಿದ ಳು. ಅಲ್ಲದೆ, ಯೋಗ ರತ್ನ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದಾಳೆ. ಈ ಪೋರಿ ಇದುವರೆಗೂ ಎರಡೂ ಬಾರಿ ವಿಶ್ವದಾಖಲೆ ನಿರ್ಮಿಸಿದ್ದಾಳೆ.

ಯೋಗದಲ್ಲಿ ವಿಶ್ವದಾಖಲೆ ಬರೆದ ಬಾಲಕಿ ನಿಧಿ

ಹಿಮಾಚಲ ಪ್ರದೇಶದ ಚೇರಿ ಖಿಯುಂಡ್ ಗ್ರಾಮದ ನಿವಾಸಿಯಾದ ನಿಧಿಗೆ ಬಾಲ್ಯದಿಂದಲೂ ಯೋಗದ ಬಗ್ಗೆ ವಿಶೇಷ ಒಲವಿತ್ತು. ಹೀಗಾಗಿ ತಂದೆ ಶಶಿಕುಮಾರ್​​ ಜೊತೆ ಮನೆಯಲ್ಲಿ ತಾನೂ ಯೋಗ ಅಭ್ಯಾಸ ಮಾಡುತ್ತಿದ್ದಳು.

ಮಗಳ ಸಾಧನೆ ಕುರಿತು ಪ್ರತಿಕ್ರಿಯಿಸಿದ ತಂದೆ ಶಶಿಕುಮಾರ್​, ಟೆಕ್ನಿಕಲ್​ ಕಮಿಟಿ ಅನುಮೋದನೆಯ ನಂತರ, ನಿಧಿಗೆ ವಿಶ್ವ ದಾಖಲೆ ಸ್ಥಾನ ನೀಡಲಾಗಿದೆ ಎಂದು ತಿಳಿಸಿದ್ರು.

ಇದೇ ವೇಳೆ ಮಾತನಾಡಿದ ನಿಧಿ ತಾಯಿ ನಿಶಾದೇವಿ, ಮಗಳ ಸಾಧನೆ ಬಗ್ಗೆ ಸಂತೋಷ ವ್ಯಕ್ತಪಡಿಸಿ, ಕೊರೊನಾ ಹಿನ್ನೆಲೆ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒಂದು ಅವಕಾಶ ಸಿಕ್ಕಂತಾಗಿದೆ ಎಂದು ಹೇಳಿದರು.

ABOUT THE AUTHOR

...view details