ನಹಾನ್ (ಹಿಮಾಚಲ ಪ್ರದೇಶ): ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾಸ್ಕ್ಗಳ ಅವಶ್ಯಕತೆ ಇದೆ. ಆದಾಗ್ಯೂ, ಮಾಸ್ಕ್ಗಳು ದುಬಾರಿಯಾಗುತ್ತಿವೆ ಮತ್ತು ದಾಸ್ತಾನು ಇಲ್ಲದಿರುವುದರಿಂದ, ಹಿಮಾಚಲ ಪ್ರದೇಶದ ಆಕ್ಟೋಜೆನೇರಿಯನ್ (80-89 ವರ್ಷದೊಳಗಿನವರು) ಮಹಿಳೆ ಈ ಕೊರತೆಯನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡಲು ಮುಂದಡಿಯಿಟ್ಟಿದ್ದಾರೆ.
ಆಶಾ ಲತಾ ತಯಾರಿಸಿರುವ ಮಾಸ್ಕ್ಗಳು ಹೌದು, ಅಮ್ಮ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಆಶಾ ಲತಾ ಪಂಡಿರ್, ಈ ಮಾಗಿದ 80 ನೇ ವಯಸ್ಸಿನಲ್ಲಿಯೂ ನಹಾನ್‌ಗೆ ಸೇರಿದ ಜನರಿಗೆ ಮಾಸ್ಕ್ಗಳನ್ನು ಹೊಲಿಯುತ್ತಿದ್ದಾರೆ. ಅಮ್ಮ ಈ ಸಮಯದಲ್ಲಿಯೂ ಭರವಸೆಯ ಕಿರಣವಾಗಿದ್ದು, ತಮ್ಮ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಮಾಸ್ಕ್ ತಯಾರಿಕೆಯಲ್ಲಿ ನಿರತರಾಗಿರುವ ಆಶಾ ಲತಾ ಪಂಡಿರ್ ಶಿಮ್ಲಾ ಸಂಸದೀಯ ಕ್ಷೇತ್ರದ ಸಂಸದ ಸುರೇಶ್ ಕಶ್ಯಪ್ ಅವರ ಸಂಬಂಧಿಯಾಗಿರುವ ಆಶಾ ಲತಾ 58 ನೇ ವಯಸ್ಸಿನಲ್ಲಿ ಹೊಲಿಗೆ ಶಿಕ್ಷಕರಾಗಿ ನಿವೃತ್ತರಾದರು. ಆ ಬಳಿಕ ಅವರು ಎಂದಿಗೂ ಹೊಲಿಗೆ ಯಂತ್ರವನ್ನು ಬಳಸಿರಲಿಲ್ಲ. ಆದರೆ, ದೇಶವು ಕೊರೊನಾ ಸಾಂಕ್ರಾಮಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆದ್ದರಿಂದ ಸುಮಾರು 20 ವರ್ಷಗಳ ಬಳಿಕ, ತಮ್ಮ 80ನೇ ವಯಸ್ಸಿನಲ್ಲಿ, ಅವರು ಮತ್ತೆ ಹೊಲಿಗೆ ಯಂತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.
ಬಟ್ಟೆಯಿಂದ ಮಾಡಿದ ಈ ಮಾಸ್ಕ್ಗಳನ್ನು ತೊಳೆದು ಮರುಬಳಕೆ ಮಾಡಬಹುದಂತೆ. ಅವರು ಮಾರ್ಚ್ 15 ರಿಂದ ತಮ್ಮ ಯಂತ್ರದ ಸಹಾಯದಿಂದ ಮಾಸ್ಕ್ಗಳನ್ನು ಹೊಲಿಯುತ್ತಿದ್ದಾರೆ ಮತ್ತು ಅದನ್ನು ಅಗತ್ಯವಿರುವ ಜನರಿಗೆ ಕಳುಹಿಸುತ್ತಾರೆ.
ಈವರೆಗೆ ಅವರು ಸುಮಾರು 300 ಮುಖಗವಸುಗಳನ್ನು ಜನರಿಗೆ ವಿತರಿಸಿದ್ದಾರಂತೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಮಾಸ್ಕ್ಗಳನ್ನು ತಯಾರಿಸಬೇಕು, ಅಲ್ಲದೇ ಅವುಗಳನ್ನು ತಮ್ಮ ನೆರೆಹೊರೆಗೂ ವಿತರಿಸಬೇಕು. ಮಾಸ್ಕ್ ತಯಾರಿಸಬೇಕೆಂದು ಯಾರಾದರೂ ಕಲಿಯಲು ಬಯಸಿದರೆ ಅವರಿಗೆ ಕಲಿಸಲು ಸದಾ ಸಿದ್ಧರಾಗಿರುವುದಾಗಿ ಆಶಾ ಲತಾ ಈಟಿವಿ ಭಾರತದೊಂದಿಗೆ ಹೇಳಿಕೊಂಡಿದ್ದಾರೆ.